ಮೇಕೆದಾಟು ಯೋಜನೆ: ಪ್ರಧಾನಿಗೆ ತಮಿಳುನಾಡು ಪತ್ರ ಇದೊಂದು ರಾಜಕೀಯ ಸ್ಟಂಟ್ – ಸಿಎಂ ಬಸವರಾಜ ಬೊಮ್ಮಾಯಿ.

Promotion

ಬೆಂಗಳೂರು, ಜೂನ್ 14,2022(www.justkannada.in):   ಮೇಕೆದಾಟು ಯೋಜನೆಯ ಬಗ್ಗೆ ತಮಿಳುನಾಡು ಸರ್ಕಾರ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿರುವುದು  ಒಂದು ರಾಜಕೀಯ ಸ್ಟಂಟ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾವೇರಿ ನದಿ ಮೇಲ್ವಿಚಾರಾಣಾ ಮಂಡಳಿಯು ಡಿಪಿಆರ್  ಅನುಮೋದನೆ ಮಾಡಬೇಕೆಂದು ಕೇಂದ್ರ ಜಲ ಆಯೋಗವೇ ಹಿಂದೆ ಷರತ್ತು ವಿಧಿಸಿತ್ತು. ಕಾವೇರಿ ನದಿ ಮೇಲ್ವಿಚಾರಣಾ ಸಮಿತಿ ಈಗಾಗಲೇ ಹಲವಾರು ಸಭೆ ನಡೆಸಿದ್ದು, ಅಂತಿಮ ಜೂನ್ 16 ರಂದು ಅಂತಿಮ ಸಭೆ ನಡೆಯಲಿದೆ.  ಕಾವೇರಿ ವಿಷಯದ ಮೇಲೆ ಈ ರೀತಿ ಹಲವಾರು ವರ್ಷಗಳಿಂದ ತಮಿಳುನಾಡು ಮಾಡಿದ್ದಾರೆ. ಇದು ಅದರ  ಭಾಗವಷ್ಟೇ. ಇದು ಕಾನೂನಿನ ಚೌಕಟ್ಟಿನಲ್ಲಿ ನಿಲ್ಲುವುದೂ ಇಲ್ಲ. ಕಾನೂನು ಬಾಹಿರ ಪತ್ರವನ್ನು ಕೇಂದ್ರ ಖಂಡಿತವಾಗಿಯೂ ಪರಿಗಣಿಸುವುದಿಲ್ಲ. ನ್ಯಾಯ ಸಿಗುವ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ತಿಳಿಸಿದರು. coronavirus-vaccine-tough-action-home-minister-basavaraja-bommai

ಜೂನ್ 16 ರಂದು ತಮಿಳುನಾಡು, ಪಾಂಡಿಚೇರಿ, ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು  ಸಭೆಯಲ್ಲಿ ಭಾಗವಹಿಸುತ್ತಾರೆ   ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Tamil Nadu letter – Prime Minister – political stunt- CM- Basavaraja Bommai.