ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದರೆ ಯಾರ ಜೊತೆ ಬೇಕಾದರೂ ಮಾತನಾಡುತ್ತೇನೆ-ಡಿ.ಕೆ ಶಿವಕುಮಾರ್….

Promotion

ಬೆಂಗಳೂರು,ಫೆಬ್ರವರಿ,24,2021(www.justkannada.in): ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದರೆ ಅದಕ್ಕಾಗಿ ಯಾರ ಜೊತೆಬೇಕಾದರೂ ಮಾತನಾಡುತ್ತೇನೆ. ಯಾರೂ ಕೂಡ ನನ್ನ ಮೇಲೆ ನಿರ್ಬಂಧ ಹೇರಿಲ್ಲ. ನಮಗೆ ಪಕ್ಷದ ತತ್ವ, ನಿಲುವು ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.

ಮಾಧ್ಯಮಗಳ ಜತೆ ಇಂದು ಮಾತನಾಡಿದ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ , ಮೈಸೂರು ಮೇಯರ್ ವಿಚಾರ, ಈಗಾಗಲೇ ಮೈಸೂರು ಮೇಯರ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಒಪ್ಪಂದ ಆಗಿದೆ. ಕಾಂಗ್ರೆಸ್ ಗೆ 2 ವರ್ಷ ಹಾಗೂ ಜೆಡಿಎಸ್ ಗೆ 3 ವರ್ಷ ಮೇಯರ್ ಸ್ಥಾನ ಎಂದು ನಿರ್ಧರಿಸಲಾಗಿತ್ತು. ಆ ಪ್ರಕಾರ ಜೆಡಿಎಸ್ ನಡೆದುಕೊಳ್ಳಲಿದೆ ಎಂದು ನಾವು ಭಾವಿಸಿದ್ದೇವೆ. ನಾವು ನಮ್ಮ ಮಾತಿಗೆ ಬದ್ಧರಾಗಿದ್ದೇವೆ. ಮೈತ್ರಿ ಮುರಿಯುವ ವಿಚಾರವಾಗಿ ಯಾರು ಏನು ಹೇಳಿದ್ದಾರೆ, ಏನು ಮಾಡಿದ್ದಾರೆ ಎಂಬುದನ್ನು ನಾನು ಪ್ರತ್ಯಕ್ಷವಾಗಿ ನೋಡಿ ತಿಳಿಯುವವರೆಗೂ ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

Talking - good – party-kpcc-president-DK Sivakumar.
ಕೃಪೆ: internet

ಶರತ್ ಬಚ್ಚೇಗೌಡ ಅವರು ಪಕ್ಷ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್,  ಶರತ್ ಬಚ್ಚೇಗೌಡ ಅವರು ನಮ್ಮ ಪಕ್ಷಕ್ಕೆ ಸಹ ಸದಸ್ಯರಾಗಿ ಕೆಲಸ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ಸ್ವತಂತ್ರ್ಯ ಅಭ್ಯರ್ಥಿಯಾಗಿ ಗೆದ್ದು, ರಾಜಕೀಯ ಪಕ್ಷ ಸೇರಲು ಸಾಧ್ಯವಿಲ್ಲ. ಸ್ವತಂತ್ರ್ಯ ಅಭ್ಯರ್ಥಿಯು ಸಿದ್ಧಾಂತದ ಆಧಾರದ ಮೇಲೆ ಸಹ ಸದಸ್ಯನಾಗಿ ಒಂದು ಪಕ್ಷಕ್ಕೆ ಬೆಂಬಲ ನೀಡಬಹುದು. ಅವರ ಕಾರ್ಯಕರ್ತರು ಪಕ್ಷ ಸೇರಬಹುದು ಎಂದರು.

ಚಿಕ್ಕಬಳ್ಳಾಪುರ ಸ್ಫೋಟ:

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟದ ಸ್ಥಳಕ್ಕೆ ನಮ್ಮ ವಿಧಾನಸಭೆ ವಿರೋಧ ಪಕ್ಷದ ನಾಯಕರು ನಿನ್ನೆ ಭೇಟಿ ನೀಡಿದ್ದು, ವಿಧಾನಪರಿಷತ್ ವಿರೋಧ ಪಕ್ಷದ ನಾಯಕರೂ ಕೂಡ ಭೇಟಿ ನೀಡಲಿದ್ದಾರೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು. ಇನ್ನು ಪಾದಯಾತ್ರೆ ವಿಚಾರವಾಗಿ ನಾಳೆ ಸಭೆ ನಡೆಸಲಿದ್ದು, ಸಭೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.

Key words: Talking – good – party-kpcc-president-DK Sivakumar.