Promotion
ನವದೆಹಲಿ, ಏಪ್ರಿಲ್ 23, 2020 (www.justkannada.in): ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಗೂ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.
ದೇಶಾದ್ಯಂತ ಕೊರೊನಾ ವೈರಸ್ ಸೋಂಕು ಹೆಚ್ಚಾಗಲು ಕಾರಣವಾದ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಸೋಂಕು ಇರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ಮೌಲಾನಾ ಸಾದ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಅವರ ಪರ ವಕಾಲತ್ತು ವಹಿಸಿರುವ ಪುಜೈಲ್ ಆಯ್ಯುಬ್ ಹೇಳಿದ್ದಾರೆ. ನೀತಿ ನಿಯಮಗಳನ್ನು ಗಾಳಿಗೆ ತೂರಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಬೃಹತ್ ಧಾರ್ಮಿಕ ಸಮಾವೇಶ ಆಯೋಜಿಸಿದ್ದ ನಂತರ ದೇಶಾದ್ಯಂತ ಕೊರೊನಾ ಸೋಂಕು ವ್ಯಾಪಸಿತ್ತು.
ಮಾರ್ಚ್ ಎರಡನೇ ವಾರದಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಮೌಲ್ವಿ ಸಾದ್ ನೇತೃತ್ವದ ಬೃಹತ್ ಸಮಾವೇಶವನ್ನ ಆಯೋಜಿಸಿದ ಬಳಿಕ ದೇಶದಲ್ಲ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿತ್ತು.