ಟಿ20 ಬ್ಯಾಟಿಂಗ್ ಶ್ರೇಯಾಂಕ: 17 ವರ್ಷದ ಶೆಫಾಲಿ ಮತ್ತೆ ನಂಬರ್ 1

Promotion

ಬೆಂಗಳೂರು, ಮಾರ್ಚ್ 24, 2021 (www.justkannada.in): 

ಐಸಿಸಿ ಬಿಡುಗಡೆ ಮಾಡಿರುವ ಟಿ20 ಮಹಿಳೆಯರ ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಮರಳಿದ್ದಾರೆ ಟೀಂ ಇಂಡಿಯಾದ ಶೆಫಾಲಿ ವರ್ಮಾ.

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​’ನಲ್ಲಿ ಮಿಂಚಿದ್ದ 17 ವರ್ಷದ ಯುವ ಪ್ರತಿಭೆ ಶಿಫಾಲಿ ಮೊದಲ ಬಾರಿಗೆ ಅಗ್ರ ಶ್ರೇಯಾಂಕ ಪಡೆದಿದ್ದರು.

ಭಾರತದ ಜೂಲನ್ ಗೋಸ್ವಾಮಿ 6 ಮತ್ತು ಪೂನಮ್ ಯಾದವ್​ 8ರ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಬ್ಯಾಟಿಂಗ್​ ಶ್ರೇಯಾಂದಲ್ಲಿ ಸ್ಮೃತಿ ಮಂಧಾನ 7, ಮಿಥಾಲಿ ರಾಜ್​ 8ನೇ ಶ್ರೇಯಾಂಕ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕ್ರಮವಾಗಿ 23 ಮತ್ತು 47 ರನ್​ಗಳಿಸಿದ ಶೆಫಾಲಿ ವರ್ಮಾ ಇದೀಗ ಮತ್ತೆ ನಂಬರ್​ 1 ಸ್ಥಾನಕ್ಕೆ ಮರಳಿದ್ದಾರೆ.