ಚಿರತೆ ಹಾವಳಿ ಹಿನ್ನೆಲೆ:  40 ಗ್ರಾಮಗಳಲ್ಲಿ ಕಬ್ಬು ಕಟಾವು ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಆದೇಶ

Promotion

ಮೈಸೂರು,ಡಿಸೆಂಬರ್,6,2022(www.justkannada.in):  ಇತ್ತೀಚೆಗೆ ಮೈಸೂರು ಜಿಲ್ಲೆ ತಿ. ನರಸೀಪುರ ತಾಲ್ಲೂಕಿನಾದ್ಯಂತ ಚಿರತೆಗಳ ಹಾವಳಿ  ಹೆಚ್ಚಾಗಿದ್ದು, ಚಿರತೆ ದಾಳಿಗೆ ಇಬ್ಬರ ಬಲಿಯಾದ  ಹಿನ್ನೆಲೆ, ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಹೊಸದೊಂದು ಆದೇಶವನ್ನ ಹೊರಡಿಸಿದ್ದಾರೆ.

ತಿ.ನರಸೀಪುರ ತಾಲ್ಲೂಕಿನ 20 ಪಂಚಾಯಿತಿಯ 40 ಗ್ರಾಮಗಳಲ್ಲಿ ಸಕಾಲದಲ್ಲಿ ಕಬ್ಬು ಕಟಾವು ಮಾಡುವಂತೆ ಮೈಸೂರು ಡಿಸಿ ಕೆ.ವಿ ರಾಜೇಂದ್ರ ಆದೇಶಿಸಿದ್ದಾರೆ. ಡ್ರೋಣ್ ಕ್ಯಾಮೆರಾ ಬಳಸಿ ಚಿರತೆ ವಾಸಿಸುವ ಸ್ಥಳವನ್ನ ಅರಣ್ಯ ಇಲಾಖೆ ಕಂಡು ಹಿಡಿದಿದ್ದು, ಕಬ್ಬಿನ ಗದ್ದೆಯಲ್ಲಿ ಚಿರತೆಗಳು ವಾಸಿಸುತಿದ್ದು , ಚಿರತೆ ಸೆರೆಗೆ ಕಬ್ಬು ಕಟಾವು ಮಾಡದಿರುವುದು ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಬ್ಬು ಕಟಾವು ಮಾಡಲು ಜಿಲ್ಲಾಡಳಿತಕ್ಕೆ ಅರಣ್ಯ ಇಲಾಖೆ ಮನವಿ ಮಾಡಿತ್ತು.

ಅರಣ್ಯ ಇಲಾಖೆ ಮನವಿಯಂತೆ ಕಬ್ಬು ಕಟಾವಿಗೆ ಅಧಿಕೃತ ಆದೇಶ ನೀಡಿರುವ  ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ, ಟಿ.ನರಸೀಪುರ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಹಾಗೂ ಜೀವಸಂಕುಲಗಳ ಪ್ರಾಣಹಾನಿ ತಡೆಯಲು ಹಾಗೂ ಸಾರ್ವಜನಿಕರಲ್ಲಿ ಚಿರತೆ ದಾಳಿ ಬಗ್ಗೆ ಭಯ ಹೋಗಲಾಡಿಸಲು ಚಿರತೆ ಸೆರೆ ಹಿಡಿಯಬೇಕಾಗಿರುವುದರಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಮೈಸೂರು ವಿಭಾಗ, ಮೈಸೂರು ರವರ ಕೋರಿಕೆಯಂತೆ ಟಿ.ನರಸೀಪುರ ತಾಲ್ಲೂಕು ವ್ಯಾಪ್ತಿಯಲ್ಲಿನ 23 ಗ್ರಾಮ ಪಂಚಾಯಿತಿಗಳಿಗೆ ಒಳಪಡುವ ಒಟ್ಟು 40 ಗ್ರಾಮಗಳಲ್ಲಿ ರೈತರು ಬೆಳೆದಿರುವ ಪಕ್ವಗೊಂಡಿರುವ ಮೊದಲ ಅದ್ಯತೆ ಮೇಲೆ ಜರೂರಾಗಿ ಕಟಾವು ಮಾಡಿಸಿ ಕಾರ್ಖಾನೆಗೆ ಸಾಗಾಣಿಕೆ ಮಾಡಿಕೊಳ್ಳಲು ಅದೇಶಿಸಿರುವುದಾಗಿ ತಿಳಿಸಿದ್ದಾರೆ.

Key words: T.Narsipur- Leopard -Mysore –DC-orders -sugarcane -harvesting – 40 villages.

ENGLISH SUMMARY…

Leopard menace: Mysuru DC orders to harvest sugarcane crop in 40 villages
Mysuru, December 6, 2022 (www.justkannada.in): Following the increasing incidents of leopard menace and death of two persons in T. Narasipura taluk in Mysuru District, Mysuru Deputy Commissioner K.V. Rajendra has issued new orders.
The Deputy Commissioner K.V. Rajendra has issued orders to undertake harvesting in 40 villages of 20 panchayat limits in T.Narasipura taluk. The Forest Department has discovered a new technology to identify leopard habitats using drone cameras. Through this leopards were found in sugarcane fields. It is the opinion of the Forest Department that the sugarcane fields have become leopards habitat as the crop has not been harvest, and hence had requested the district administration to issue orders to the farmers of the taluk to harvest sugarcane crop.
Keywords: Mysuru/ Deputy Commissioner/ Sugarcane fields/ leopard menace