ಈ ದಿನ ಕೋಟ್ಯಂತರ ರಾಮಭಕ್ತರ ಸಂಕಲ್ಪದ ದಿನ :ರಾಮಮಂದಿರ ನಿರ್ಮಾಣ ರಾಷ್ಟ್ರ ಒಗ್ಗೂಡಿಸುವ ಭಾವೈಕ್ಯತೆಯ ಪ್ರತೀಕ –ಪ್ರಧಾನಿ ಮೋದಿ…

Promotion

ಆಯೋಧ್ಯೆ,ಆ,5,2020(www.justkannada.in):  ರಾಮಮಂದಿರ ನಿರ್ಮಾಣ ರಾಷ್ಟ್ರ ಒಗ್ಗೂಡಿಸುವ ಭಾವೈಕ್ಯತೆಯ ಪ್ರತೀಕ. ಈ ದಿನ ಕೋಟ್ಯಾಂತರ ರಾಮಭಕ್ತರ ಸಂಕಲ್ಪದ ದಿನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ  ಬಣ್ಣಿಸಿದರು.jk-logo-justkannada-logo

ಅಯೋಧ್ಯೆಯಲ್ಲಿಂದು ಐತಿಹಾಸಿಕ ರಾಮಮಂದಿರ ನಿರ್ಮಾಣಕ್ಕೆ ಇಂದು ಶಿಲನ್ಯಾಸ ಕಾರ್ಯಕ್ರಮ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಶಿಲನ್ಯಾಸದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ‘ಜೈ ಶ್ರೀರಾಮ ಘೋಷಣೆಯ ಈ ಧ್ವನಿ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ಇಂದು ಇಡೀ ದೇಶ ರೋಮಾಂಚಿತವಾಗಿದೆ. ಎಲ್ಲವೂ ರಾಮಮಯ. ಎಲ್ಲರ ಮನಸ್ಸೂ ಬೆಳಗುತ್ತಿದೆ. ಬಹುಕಾಲದ ನಿರೀಕ್ಷೆ ಇಂದು ಕೊನೆಯಾಗಿದೆ. ರಾಮಮಂದಿರ ಹೋರಾಟಕ್ಕೆ ಅರ್ಪಣ, ತರ್ಪಣವಿತ್ತು. ಈ ನಿಟ್ಟಿನಲ್ಲಿ 130 ಕೋಟಿ ಭಾರತೀಯರಿಗೆ ತಲೆಬಾಗಿ ನಮಿಸುತ್ತೇನೆ ಎಂದರು.

ಶ್ರೀರಾಮ ಭಾರತದ ಗೌರವ, ಶ್ರೀರಾಮ ಮರ್ಯಾದಾ ಪುರುಷತ್ತೋಮ. ರಾಮ ಎಲ್ಲರ ಮನಸ್ಸಿನಲ್ಲಿದ್ದಾನೆ. ರಾಮಮಂದಿರ  ನಮ್ಮ ಸಂಸ್ಕೃತಿಯ ಅಧುನಿಕ ಪ್ರತಿನಿಧಿ.  . ರಾಮಮಂದಿರ ನಿರ್ಮಾಣ ರಾಷ್ಟ್ರ ಒಗ್ಗೂಡಿಸುವ ಪ್ರಕ್ರಿಯೆ. ಶ್ರೀರಾಮ ಎಲ್ಲರಲ್ಲೂ ಇದ್ದಾನೆ ಎಲ್ಲಾಕಡೆಯೂ ಇದ್ದಾನೆ.  ಶ್ರೀರಾಮ ಸಾಮಾಜಿಕ ಸಾಮರಸ್ಯವನ್ನ ಆಧಾರ ಶಿಲೆಯನ್ನಾಗಿ ಮಾಡಿಕೊಂಡಿದ್ದರು. ಅವರು ವಿವಿಧತೆಯಲ್ಲಿ ಏಕತೆಯೇ ಆಗಿದ್ದಾರೆ ಎಂದು ಪ್ರಧಾನಿ ಬಣ್ಣಿಸಿದರು.

ನಿರಂತರ ಹೋರಾಟದ ನಂತರ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದೆ. ರಾಮಮಂದಿರ ನಿರ್ಮಾಣವಾದರೆ ದೇಶದ ಪೂರ್ಣ ಅರ್ಥ ವ್ಯವಸ್ಥೆ ಬದಲಾಗಲಿದೆ. ಈ ದಿನ ಕೋಟ್ಯಂತರ ರಾಮಭಕ್ತರ ಸಂಕಲ್ಪದ ದಿನ. ರಾಮಮಂದಿರ ದೇಶದ ಹೊಸ ಪ್ರತೀಕವಾಗಲಿದೆ. ರಾಮಮಂದಿರ ಪೂರ್ಣಗೊಂಡ ಬಳಿಕ ಪ್ರತಿ ಕ್ಷೇತ್ರದಲ್ಲೂ ಅವಕಾಶಗಳು ಸೃಷ್ಟಿಯಾಗಲಿವೆ. ರಾಮಮಂದಿರ ದೇಶವನ್ನು ಒಗ್ಗೂಡಿಸುವ ರಾಷ್ಟ್ರೀಯ ಭಾವೈಕ್ಯತೆಯ ಪ್ರತೀಕವಾಗಿ ಮೂಡಿಬರಲಿದೆ. ಮುಂದಿನ ತಲೆಮಾರಿಗೆ ಭಕ್ತಿ, ಸಂಕಲ್ಪದ ಪ್ರೇರಣೆ ನೀಡಲಿದೆ. ಮಂದಿರ ನಿರ್ಮಾಣದ ಬಳಿಕ ಭಾರತದ ಕೀರ್ತಿ ಹೆಚ್ಚಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.symbol - unity – nation-ram mandir-ayodhya-PM –narendra Modi.

ಮನೆ ಮನೆಯಿಂದ ಹಳ್ಳಿ ಹಳ್ಳಿಗಳಿಂದ ತಂದ ಕಲ್ಲುಗಳು ಮಂಧಿರದಿಂದ ತಂದ ಮರಳು ಪವಿತ್ರ ಜಲ ಎಲ್ಲವೂ ಸೇರಿ ಆಶೀರ್ವಾದವಾಗಿದೆ. ಮಲೇಷ್ಯಾ, ಥೈಲಾಂಡ್ , ಇರಾನ್, ಚೀನಾದಲ್ಲೂ ರಾಮಯಾಣದ ಪ್ರಸಂಗ ವಿವರ ಇದೆ.  ಇಂಡೋನೇಷಿಯಾ ಕಾಂಬೋಡಿಯಾದಲ್ಲೂ ರಾಮಾಯಣ ಇದೆ. ಎಲ್ಲಾ ದೇಶದಲ್ಲಿನ ಜನರಿಗೂ ರಾಮಮಂದಿರದಿಂದ ಸಂತಸವಾಗುತ್ತದೆ.  ಕನ್ನಡದ ಕುಮುದೆಂದು ರಾಮಾಯಣ , ತಮಿಳುನಲ್ಲಿ ರಾಮಾಯಣ  ಬಗ್ಗೆ ವಿವಿಧ ಭಾಷೆಗಳಲ್ಲಿ ರಾಮಾಯಣ ಬಗ್ಗೆ ತಿಳಿಸಲಾಗಿದೆ ಎಂದು ಪ್ರಧಾನಿ ಮೋದಿ ಸ್ಮರಿಸಿದರು.

Key words: symbol – unity – nation-ram mandir-ayodhya-PM –narendra Modi.