ಕೇರಳದಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ ಶಾಸಕ ಎ.ಕೆ.ಎಂ. ಅಶ್ರಫ್ ಅವರಿಗೆ ಟಿ.ಎಸ್ ನಾಗಾಭರಣ ಅಭಿನಂದನೆ…

Promotion

ಬೆಂಗಳೂರು,ಮೇ,25,2021(www.justkannada.in):   ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಕೇರಳ ವಿಧಾನಸಭೆಯಲ್ಲಿ ಕಸ್ತೂರಿ ಕನ್ನಡದ ಕಂಪು ಪಸರಿಸಿದ ಮಂಜೇಶ್ವರ ಕ್ಷೇತ್ರದ ಎ.ಕೆ.ಎಂ. ಅಶ್ರಫ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಟಿ ಎಸ್ ನಾಗಾಭರಣ ಅವರು ಅಖಂಡ ಕನ್ನಡ ಮನಸ್ಸುಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನ ಸಲ್ಲಿಸಿದ್ದಾರೆ.Kannada campaign-kannada kayaka varsha-Kannada Development Authority-TS Nagabarana

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ಶಾಸಕ ಎ.ಕೆ.ಎಂ. ಅಶ್ರಫ್ ಅವರನ್ನ ಶ್ಲಾಘಿಸಿರುವ ಟಿ,ಎಸ್ ನಾಗಾಭರಣ,  ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗುವ ಕೆಲವರು ಮಾತೃಭಾಷೆಯನ್ನೇ ಕಡೆಗಣಿಸುವುದನ್ನು ನಾವು ಗಮನಿಸಿರುತ್ತೇವೆ. ಅಲ್ಲದೆ ವಿಧಾನಸಭೆಗೆ ಆಯ್ಕೆಯಾದ ಬಹುತೇಕ ಶಾಸಕರು ಮಲಯಾಳಂ ಭಾಷೆಯಲ್ಲಿ ಪ್ರಮಾಣವಚನವನ್ನು ಸ್ವೀಕರಿಸಿದರೆ, ಎ.ಕೆ.ಎಂ. ಅಶ್ರಫ್ ರವರು ಮಾತ್ರ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಮಾತೃಪ್ರೇಮವನ್ನು ಮೆರೆದಿದ್ದಾರೆ. ಇಂತಹ ಮಾದರಿಗಳು ಕನ್ನಡದ ಸಮೃದ್ಧತೆಗೆ ಪೂರಕವಾಗಲಿದೆ ಎಂದು ತಿಳಿಸಿದ್ದಾರೆ.

ಕೇರಳ ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಮಂಜೇಶ್ವರ ಕ್ಷೇತ್ರದ ಯುಡಿಎಫ್ ಶಾಸಕ  ಎ.ಕೆ.ಎಂ. ಅಶ್ರಫ್ ಅವರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಕನ್ನಡಿಗರ ಗಮನ ಸೆಳೆದಿದ್ದಾರೆ, ಕನ್ನಡಿಗರ ಹೃದಯ ಗೆದ್ದಿದ್ದಾರೆ ಅವರನ್ನು ಪ್ರಾಧಿಕಾರ ಹೃದಯಸ್ಪರ್ಶಿಯಾಗಿ ಸ್ಮರಿಸುವುದಾಗಿ ಹೇಳಿದ್ದಾರೆ.

ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕು ವ್ಯಾಪ್ತಿಯನ್ನು ‘ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶ’ ಎಂಬುದಾಗಿ ಕೇರಳ ಸರ್ಕಾರ ಘೋಷಣೆ ಮಾಡಿದೆ. ಇಂತಹ ಹೊತ್ತಲ್ಲಿ ಎ.ಕೆ.ಎಂ. ಅಶ್ರಫ್ ಅವರು ಕನ್ನಡದ ಕಂಪನ್ನು ಕೇರಳ ವಿಧಾನಸಭೆಯಲ್ಲಿ ಪಸರಿಸಿದ್ದು, ಗಡಿಭಾಗದಲ್ಲಿಯೂ ಕನ್ನಡದ ಭಾಷಾಭಿಮಾನವನ್ನು ಮೆರೆಯುವ ಮೂಲಕ ಅಖಂಡ ಕರ್ನಾಟಕದ ಪ್ರತಿನಿಧಿಯಾಗಿ ವಿಧಾನಸಭೆಯನ್ನು ಪ್ರವೇಶಿಸಿರುವುದು ದಾಖಲಾರ್ಹ ಎಂದು ಟಿ.ಎಸ್ ನಾಗಾಭರಣ ಅವರು ಉಲ್ಲೇಖಿಸಿದ್ದಾರೆ.sworn-kannada-manjeshwar-mla-ashraf-congratulates-ts-nagabharana

ಕರ್ನಾಟಕ ಮತ್ತು ಕೇರಳದ ನಡುವೆ ಸಿಲುಕಿಕೊಂಡಿರುವ ಕಾಸರಗೋಡು ಇಂದು ಭೌತಿಕವಾಗಿ ಕರ್ನಾಟಕದಿಂದ ಹೊರಗಿದ್ದರೂ ಭಾವನಾತ್ಮಕವಾಗಿ ಕರ್ನಾಟಕದ ರಕ್ತಮಾಂಸದ ಭಾಗವೇ ಆಗಿದ್ದು ನಿತ್ಯವೂ ಹೋರಾಟದ ಭೂಮಿಯಾಗಿದೆ. ಇಂತಹ ಸಂದರ್ಭದಲ್ಲಿ ಕನ್ನಡದ ವೀರಸೇನಾನಿಯಂತೆ ಕೇರಳ ವಿಧಾನಸಭೆಗೆ ಅಶ್ರಫ್ ಅವರು ಆಯ್ಕೆಯಾಗಿರುವುದು. ನಿಜಕ್ಕೂ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಇಂತಹ ಮಾದರಿಗಳು ಹೆಚ್ಚಬೇಕು ಎಂದು ಟಿ.ಎಸ್ ನಾಗಾಭರಣ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ.

Key words: Sworn-Kannada- manjeshwar- MLA- Ashraf-congratulates- TS Nagabharana.

ENGLISH SUMMARY…

T.S. Nagabharana appreciates MLA A.K.M. Ashraf who received the oath in Kannada
Bengaluru, May 25, 2021 (www.justkannada.in): T.S. Nagabharana, President of the Kannada Development Authority has appreciated Manjeshwara Assembly Constituency MLA A.K.M. Ashraf who received the oath in Kannada in the Kerala Assembly.sworn-kannada-manjeshwar-mla-ashraf-congratulates-ts-nagabharana
In a press release, Nagabharana stated that “We have noticed many people forgetting their mother tongue under the influence of English language. In Kerala, almost all the MLAs took the oath in Malayalam, whereas A.K.M. Ashraf received the oath in Kannada exhibiting his love for Kannada. He has indeed set an example for all others.”
A.K.M. Ashraf contested from the Manjeshwara Assembly Constituency in Kasargod District, on a UDF ticket and won in the byelections held in Kerala. Now he has won the hearts of Kannadigas by receiving the oath in Kannada.
Keywords: T.S. Nagabharana/ Kannada Development Authority/ A.K.M. Ashraf/ Manjeshwara Assembly Constituency/ Kasargod District/ oath in Kannada