ಸಚಿವರ ಕಾರ್ಯಕ್ರಮದಲ್ಲಿ ಶರ್ಟ್ ನಲ್ಲಿ ಡ್ಯಾಗರ್ ಹಿಡಿದು ಓಡಾಡುತ್ತಿದ್ದ ಅನುಮಾನಸ್ಪದ ವ್ಯಕ್ತಿ ಪೊಲೀಸರ ವಶಕ್ಕೆ.

Promotion

ಚಿಕ್ಕಬಳ್ಳಾಪುರ,ಜುಲೈ,29,2022(www.justkannada.in): ಆರೋಗ್ಯ ಸಚಿವ ಡಾ ಕೆ. ಸುಧಾಕರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ  ಶರ್ಟ್ ನಲ್ಲಿ ಡ್ಯಾಗರ್  ಹಿಡಿದು ಓಡಾಡುತ್ತಿದ್ದ ಅನುಮಾನಸ್ಪದ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಉಜ್ವಲ ಭಾರತ ಉಜ್ವಲ ಭವಿಷ್ಯ ಕಾರ್ಯಕ್ರಮಕ್ಕೆ ಸಚಿವ ಸುಧಾಕರ್ ತೆರೆಳಿದ್ದರು. ಕಾರ್ಯಕ್ರಮ ಮುಗಿಸಿ ಹೊರಡುತ್ತಿದ್ದಾಗ ಗಂಗರಾಜು ಎಂಬಾತ ಶರ್ಟ್ ನಲ್ಲಿ ಡ್ಯಾಗರ್ ಹಿಡಿದು ಅನುಮಾನಸ್ಪದವಾಗಿ ಓಡಾಡುತ್ತಿದ್ದುದ್ದು  ಪೊಲೀಸರ ಗಮನಕ್ಕೆ ಬಂದಿದೆ. ಸಚಿವರು ಸಾರ್ವಜನಿಕರ ಜೊತೆ ಮಾತನಾಡುತ್ತಿದ್ದಾಗ ಪೊಲೀಸರು ಜನರನ್ನು ಹಿಂದಕ್ಕೆ ತಳ್ಳುತ್ತಿದ್ದರು.

ಆ ವೇಳೆ, ಪೊಲೀಸ್ ಸಿಬ್ಬಂದಿ ಕೈ ವ್ಯಕ್ತಿಯ ಹೊಟ್ಟೆಗೆ ತಗುಲಿದಾಗ ಅಲ್ಲಿ ಡ್ಯಾಗರ್ ಇರುವುದು ಪತ್ತೆಯಾಗಿದೆ. ತಕ್ಷಣ ಡ್ಯಾಗರ್ ಹೊಂದಿದ್ದ ವ್ಯಕ್ತಿಯನ್ನು ಗುಡಿಬಂಡೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಸಚಿವರು ಕಾರು ಹತ್ತಿ ಬೆಂಗಳೂರಿನತ್ತ ಹೊರಟಿದ್ದಾರೆ.

Key words: suspicious-person -minister’s- program – custody – police.