ಗೋಲ್ಡನ್ ಸ್ಟಾರ್ ಗಣೇಶ್’ಗೆ ನಾಯಕಿಯಾಗಲು ಬಂದ ಸುರಭಿ!

Promotion

ಬೆಂಗಳೂರು, ಫೆಬ್ರವರಿ 13, 2020 (www.justkannada.in): ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಕಾಂಬಿನೇಷನ್’ನಲ್ಲಿ ಮೂಡಿಬರುತ್ತಿರುವ ಸಿನಿಮಾಗೆ ಹೊಸ ನಟಿಯೊಬ್ಬರು ಆಗಮಿಸುತ್ತಿದ್ದಾರೆ.

ಹೌದು. ಗಣೇಶ್ ಸಿನಿಮಾಗೆ ಈಗ ಪರಭಾಷೆ ನಾಯಕಿಯ ಆಗಮನವಾಗಿದೆ. ತೆಲುಗು ಮತ್ತು ತಮಿಳು ಸಿನಿಮಾದಲ್ಲಿ ನಟಿಸಿರುವ ಸುರಭಿ ಗಣೇಶ್’ಗೆ ನಾಯಕಿಯಾಗುತ್ತಿದ್ದಾರೆ.

ಫೆಬ್ರವರಿ 24 ರಿಂದ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಸಿಂಪಲ್ ಸುನಿ ಮತ್ತು ಗಣೇಶ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ಈ ಸಿನಿಮಾ ಪಕ್ಕಾ ಎಂಟರ್ ಟೈನ್ ಮೆಂಟ್ ಸಿನಿಮಾವಾಗಲಿದೆ.