ಮಂಗಳವಾರದವರೆಗೆ ಸರ್ಕಾರಕ್ಕೆ ರಿಲೀಫ್: ಯಥಾಸ್ಥಿತಿ ಮುಂದುವರಿಕೆಗೆ ಆದೇಶಿಸಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್….

ನವದೆಹಲಿ,ಜು,12,2019(www.justkannada.in): ತಮ್ಮ ರಾಜೀನಾಮೆ ಅಂಗೀಕಾರಕ್ಕೆ ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಸ್ಪೀಕರ್ ವಿರುದ್ದ ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಯಥಾಸ್ಥಿತಿ ಮುಂದುವರಿಕೆಗೆ ಆದೇಶಿಸಿ ವಿಚಾರಣೆಯನ್ನ ಮಂಗಳವಾರಕ್ಕೆ ಮುಂದೂಡಿದೆ.

ಅತೃಪ್ತ ಶಾಸಕರು ಸ್ಪೀಕರ್ ವಿರುದ್ದ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ  ಸುಪ್ರೀಂಕೋರ್ಟ್, ಮಂಗಳವಾರದವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಆದೇಶಿಸಿದೆ. ಈ ಮೂಲಕ ರಾಜೀನಾಮೆ ಅಂಗೀಕರ ಮಾಡುವಂತಿಲ್ಲ. ಅನರ್ಹತೆ ಇಲ್ಲ ಮಾಡುವಂತೆ ಹೇಳಿ ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಅತೃಪ್ತ ಶಾಸಕರ ಬಗ್ಗೆ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ ವಾದ ಮಂಡಿಸಿದ್ದರು, ಸ್ಪೀಕರ್ ಅವರ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು.

ನ್ಯಾಯಪೀಠದ ಮುಂಧೆ ಅತೃಪ್ತ ಶಾಸಕರ ಪರವ ವಾದ ಮಂಡಿಸಿದ ಮುಕುಲ್ ರೋಹಟಗಿ ಅವರು,  ಶಾಸಕರು ಸರಕಾರದ ಪರ ಮತ ಚಲಾವಣೆ ಮಾಡುವುದಕ್ಕೆ ಇಷ್ಟವಿಲ್ಲ. ಸ್ಪೀಕರ್‌ ಉದ್ದೇಶವಾಗಿ ರಾಜೀನಾಮೆಯನ್ನು ಅಂಗೀಕರ ಮಾಡುವುದಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂದು ಹೆಳಿದರು.

ಇನ್ನೂ ಸ್ಪೀಕರ್‌ ಪರವಾಗಿ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ,  ಸ್ಪೀಕರ್‌ ಅವರಿಗೆ ಮನವರಿಕೆಯಾದ್ರೆ ಮಾತ್ರ ರಾಜೀನಾಮೆ ಅಂಗೀಕರ ಮಾಡುತ್ತಾರೆ. ಶಾಸಕರ ವಿಚಾರಣೆಗೆ ಸಮಯವನ್ನು ನಿಗದಿಪಡಿಸಿದ್ದಾರೆ. ಶಾಸಕರು ಸ್ಪೀಕರ್‌ ಕೈಗೆ ರಾಜೀನಾಮೆ ನೀಡಬೇಕು. ಅನರ್ಹತೆ ತಪ್ಪಿಸುವುದಕ್ಕೆ ರಾಜೀನಾಮೆ ನೀಡಿದ್ದಾರೆ ಅಂತ ಹೇಳಿದರು. ಇನ್ನು ಶಾಸಕರು ಮುಂಬೈನಲ್ಲಿ ಇರೋದು ಯಾಕೆ? ನ್ಯಾಯಾಲಯದಲ್ಲಿ ಪ್ರಶ್ನೆಮಾಡಿದರು. ಇದೇ ವೇಳೆ ಸಮಯದ ಗಡುವನ್ನು ಸ್ಪೀಕರ್‌ ನೀಡಲು ಸಾಧ್ಯವಾಗೋದಿಲ್ಲ ರಾಜೀನಾಮೆಯ ಅಂಗೀಕಾರ ಸಮಯದ ಗಡುವನ್ನು ಸ್ಪೀಕರ್‌ ನೀಡಲು ಸಾಧ್ಯವಾಗೋದಿಲ್ಲ ಅಂತ ಹೇಳಿದರು. ಅವರು ಹೀಗಾಗಿ ನೀವು ಇದಕ್ಕೆ ಗಡುವು ನೀಡಬೇಡ ಬೇಡಿ ಅಂತ ಹೇಳಿದರು, ಶಾಸಕರ ಅನರ್ಹತೆ ಮೊದಲು ಬಗ್ಗೆ ಸ್ಪೀಕರ್‌ ನಿರ್ಧಾರಿಸಲಿ ನಾಳೆ ಸರಕಾರ ರಚನೆಯಾದ್ರೆ ಶಾಸಕರು ಸಚಿವರಾವರಾಗುತ್ತಾರೆ, 1974 ರ ತಿದ್ದುಪಡಿ ಪ್ರಕಾರ ಸುಮ್ಮನೆ ರಾಜೀನಾಮೆಯನ್ನು ಅಂಗೀಕಾರ ಮಾಡೋದಕ್ಕೆ ಸಾಧ್ಯವಿಲ್ಲ ಅಂತ ಹೇಳಿದರು.

ಇನ್ನು ಸ್ಪೀಕರ್‌ಗೆ ನಮ್ಮ ಅಧಿಕಾರದ ವ್ಯಾಪ್ತಿಯನ್ನು ಪ್ರಶ್ನೆ ಮಾಡುತ್ತೀರಾ ಅಂತ ಸಿಜೆಐ ಪ್ರಶ್ನೆ ಮಾಡಿದರು. ನಾವು ಕೈ ಕಟ್ಟಿ ಕೂರಬೇಕಾ ಅನ್ನೋಂದು ನಿಮ್ಮ ನಿಲುವ ಅಂತ ಪ್ರಶ್ನೆ ಮಾಡಿದರು.

ಇನ್ನು ಸಿಎಂ ಪರವಾಗಿ ವಾದ ಮಂಡಿಸಿದ ವಕೀಲ ರಾಜೀವ್‌ ಧವನ್‌ ಉದ್ದೇಶ ಪೂರ್ವಕವಾಗಿ ಸರಕಾರವನ್ನು ಬೀಳಿಸುವುದಕ್ಕೆ ಇವರು ಮುಂದಾಗಿದ್ದಾರೆ. ಇದಲ್ಲದೇ ಸಿಎಂ ಕುಮಾರಸ್ವಾಮಿಯವರಿಗೆ ಬಹುಮತವಿದೆ. ನನ್ನ ವಿರುದ್ದವಾಗಿ ಏಕಪಕ್ಷೀಯವಾಗಿ ನೀವು ಆದೇಶ ನೀಡಿದ್ದಾರೆ. ಶಾಸಕರು ಮಾಡುತ್ತಿರುವ ಆರೋಪ ಸರಿಯಿಲ್ಲ ಅಂತ  ವಾದ ಮಂಡಿಸಿದರು.

Key words:  Supreme Court -ordering -continuation -Relief – government