ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆ: ಕಾಂಗ್ರೆಸ್ ನಾಯಕರ ಜತೆ ಚರ್ಚಿಸಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ….

Promotion

ಬೆಂಗಳೂರು,ಜು,17,2019(www.justkannada.in):  ಅತೃಪ್ತ ಶಾಸಕರ ರಾಜೀನಾಮೆ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಗರದ ಹಿಲ್ಟನ್ ಹೋಟೆಲ್ ನಲ್ಲಿ ಕಾಂಗ್ರೆಸ್ ನಾಯಕರ ಜತೆ ಚರ್ಚೆ ನಡೆಸಿದ್ದಾರೆ.

ಸುಪ್ರೀಂ ತೀರ್ಪು ಹೊರ ಬಿದ್ದ ನಂತರ ಸಿಎಂ ಹೆಚ್.ಡಿ ಕುಮಾರಸ್ವಾಮಿ ದೊಮ್ಮಲೂರಿನ ಎಂಬಸ್ಸಿ ಬುಸಿನೆಸ್ ಪಾರ್ಕ್ ಒಳಗಿರುವ ಹಿಲ್ಟನ್ ಹೋಟೆಲ್ ನಲ್ಲಿ ಕಾಂಗ್ರೆಸ್ ನಾಯಕರ ಜತೆ ಸಭೆ ನಡೆಸಿ ಮಹತ್ವದ ಮಾತುಕತೆ ನಡೆಸಿದ್ದಾರೆ.  ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಕೃಷ್ಣ ಭೈರೇಗೌಡ, ದಿನೇಶ್ ಗುಂಡುರಾವ್, ಗೃಹ ಸಚಿವ ಎಂ.ಬಿ ಪಾಟೀಲ್, ಉಪಸ್ಥಿತರಿದ್ದರು.

ಅತೃಪ್ತರ ರಾಜೀನಾಮೆ ಅಂಗೀಕಾರದ ಬಗ್ಗೆ ಸುಪ್ರೀಂ  ನೀಡಿರುವ ತೀರ್ಪಿನಿಂದ ದೋಸ್ತಿ ನಾಯಕರು ತೀವ್ರ ತಲೆಕೆಡಿಸಿಕೊಂಡಿದ್ದು,  ಎಂಬಸ್ಸಿ ಬುಸಿನೆಸ್ ಪಾರ್ಕ್ ಒಳಗಿನ  ಹಿಲ್ಟನ್ ಹೋಟೆಲ್ ನಲ್ಲಿ ರಹಸ್ಯ ಸಭೆ ನಡೆಸಿದ್ದಾರೆ. ತಮ್ಮ ಎಸ್ಕಾರ್ಟ್ ವೆಹಿಕಲ್ ಗಳನ್ನು ಹೊರಗೆ ಕಳುಹಿಸಿ ಹೋಟೆಲ್ ಒಳಗೆ ಸಭೆ ನಡೆಸಿದ್ದು, ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ.

ದೋಸ್ತಿ ನಾಯಕರು ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಅಂತಿಮ ಕಸರತ್ತು ನಡೆಸುತ್ತಿದ್ದು, ನಾಳೆ ಸಮ್ಮಿಶ್ರ ಸರ್ಕಾರದ ಅಳಿವು ಉಳಿವು ನಿರ್ಧಾರವಾಗಲಿದೆ.

Key words: Supreme Court –judgment-CM HD Kumaraswamy- discussed –with- Congress leaders.