ಅತೃಪ್ತ ಶಾಸಕರ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ: ರಾಜೀನಾಮೆ ಅನರ್ಹತೆ ಬಗ್ಗೆ ಶೀಘ್ರ ನಿರ್ಧಾರ: ಸ್ಪೀಕರ್ ರಿಂದ ಅಫಿಡವಿಟ್…

ಹೊಸದಿಲ್ಲಿ, ಜು.12,2019(www.justkannada.in):  ರಾಜೀನಾಮೆ ಅಂಗೀಕರಿಸಲು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ವಾದ ಪ್ರತಿವಾದ ನಡೆಯುತ್ತಿದೆ.

ಇನ್ನು ಸ್ಪೀಕರ್ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸುತ್ತಿದ್ದರೇ ಅತೃಪ್ತ ಶಾಸಕರ ಪರ ಮುಕುಲ್ ರೋಹ್ಟಗಿ ವಾದ ಮಂಡನೆ ಮಾಡಿದ್ದಾರೆ. ಈ ನಡುವೆ ಅತೃಪ್ತರ ರಾಜೀನಾಮೆ ಅನರ್ಹತೆ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸ್ಪೀಕರ್  ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅಫಿಡವಿಟ್ ಸಲ್ಲಿಸಿದ್ದಾರೆ.

ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡಿಸಿದ ಅತೃಪ್ತ ಪರ ವಕೀಲ ಮುಕುಲ್ ರೋಹ್ಟಗಿ, ಅತೃಪ್ತ ಶಾಸಕರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ ಈ ಬಗ್ಗೆ ವಿಡಿಯೋ ಚಿತ್ರೀಕರಣ ಕೂಡ ಇದೆ. ಅತೃಪ್ತ ಶಾಸಕರಿಗೆ ವಿಪ್ ನೀಡಲಾಗಿದೆ ಸ್ಪೀಕರ್ ನಡೆಯಿಂದ ಶಾಸಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅವರ ರಾಜೀನಾಮೆ ಅಂಗೀಕರಿಸದಿದ್ದರೆ ನ್ಯಾಯಾಂಗ ನಿಂದನೆ ಆಗುತ್ತದೆ. ಸ್ಪೀಕರ್  ಸರ್ಕಾರದ ಪರ  ನೆರವು ನೀಡುತ್ತಿದ್ದಾರೆ.  ಸುಪ್ರೀಂಕೋರ್ಟ್ ಗೆ ಸೆಡ್ಡು ಹೊಡೆದಿದ್ದಾರೆ. ಸ್ಪೀಕರ್ ಸುದ್ದಿಗೋಷ್ಠಿಯಲ್ಲಿ ಸುಳ್ಳು ಹೇಳಿದ್ದಾರೆ ಎಂದು ತಿಳಿಸಿದರು.

ಹಾಗೆಯೇ  ಮೊದಲೇ ರಾಜೀನಾಮೆ ನೀಡಿದ ಇಬ್ಬರ ಬಗ್ಗೆ ಏನಾದ್ರು ಮಾಡಲಿ.  ಉದ್ದೇಶಪೂರ್ವಕವಾಗಿ ವಿಪ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ಸ್ಪೀಕರ್ ಪರ ವಾದ ಮಂಡಿಸಿದ  ವಕೀಲ ಅಭಿಷೇಕ ಮನು ಸಿಂಘ್ವಿ ಅವರು,  ‘ ರಾಜೀನಾಮೆ ಅಂಗೀಕರಿಸುವುದಿಲವೆಂದು ಅವರು ಹೇಳಿಲ್ಲ ಕಾಲಾವಕಾಶ ಕೇಳಿದ್ದಾರೆ ಅಷ್ಟೇ. ಶಾಸಕರ ವರ್ತನೆ ಅನುಮಾನಾಸ್ಪದವಾಗಿವೆ. ತಮಗೆ ಮನವರಿಕೆಯಾಗುವರೆಗೆ ರಾಜೀನಾಮೆ ಅಂಗೀಕರಿಸುವುದಿಲ್ಲ. ಮೊದಲು ಶಾಸಕರ ಅನರ್ಹತೆ ಬಗ್ಗೆ ಸ್ಪೀಕರ್ ನಿರ್ಧರಿಸಲಿ ಎಂದು ಸುಪ್ರೀಂಕೋರ್ಟ್ ನಲ್ಲಿ ತಿಳಿಸಿದರು.

ಹಾಗೆಯೇ ಅತೃಪ್ತ ಶಾಸಕರು ಮುಂಬೈ ಹೋಟೆಲ್ ನಲ್ಲಿರುವುದೇಕೆ..? ಅವರು ಬೇರೆ ಪಕ್ಷಕ್ಕೆ ಹೋದರೇ ತಪ್ಪಲ್ಲವೇ..?  ಬಿಜೆಪಿ ಸರ್ಕಾರ ರಚನೆಯಾದ್ರೆ 10 ಅತೃಪ್ತ ಶಾಸಕರು ಸಚಿವರಾಗ್ತಾರೆ. ಹೀಗಾಗಿ ಮೊದಲು ಅನರ್ಹತೆ ಬಗ್ಗೆ ನಿರ್ಧಾರವಾಗಬೇಕು ಎಂದು ವಾದ ಮಂಡಿಸಿದರು.

ಇದೇ ವೇಳೆ ಸ್ಪೀಕರ್ ಪರ ವಕೀಲರಿಗೆ  ಸ್ಪೀಕರ್ ಸುಪ್ರೀಂ ಕೋರ್ಟ್ ನ ಅಧಿಕಾರವನ್ನು ಪ್ರಶ್ನಿಸುತ್ತಿದ್ದಾರಾ ? ಎಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಪ್ರಶ್ನಿಸಿದರು.

ಇನ್ನು ಸಿಎಂ ಪರ ವಾದ ಮಂಡಿಸಿದ ರಾಜೀವ್ ಧವನ್ ಸಿಎಂ ಕುಮಾರಸ್ವಾಮಿಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಇದೆ. ಸರಕಾರ ಅಲ್ಪಮತಕ್ಕೆ ಕುಸಿಯಲೆಂದು ಶಾಸಕರು ರಾಜೀನಾಮೆ ನೀಡಿದ್ದಾರೆ. ಕೋರ್ಟ್ ಏನು ಮಾಡಬೇಕೆಂದು ಶಾಸಕರು ಬಯಸಿದ್ದಾರೆ. ಯಾವ ಆಧಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡುವಂತೆ ಅವರು ಕೇಳಿದ್ದಾರೆ. ಈ ವಿಚಾರದಲ್ಲಿ ರಾಜ್ಯಪಾಲರಿಗೆ ಯಾವುದೇ ಅಧಿಕಾರ ಇಲ್ಲ ಎಂದು ತಿಳಿಸಿದರು.

Key words: Supreme Court- hearing – dissatisfied- legislator’s- petition: