ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ನಲ್ಲಿ ಭಾರಿ ಹಿನ್ನೆಡೆ…

Promotion

ನವದೆಹಲಿ,ಆ,13,2019(www.justkannada.in):  ಸ್ಪೀಕರ್ ನೀಡಿದ್ದ ಅನರ್ಹತೆ ಆದೇಶ ಪ್ರಶ್ನಿಸಿ  ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ  ಅನರ್ಹಶಾಸಕರಿಗೆ ಭಾರಿ ಹಿನ್ನೆಡೆಯಾಗಿದೆ.

ಸ್ಪೀಕರ್ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನ ತುರ್ತು ವಿಚಾರಣೆ ಮಾಡುವಂತೆ ಅನರ್ಹ ಶಾಸಕರು ಸುಪ್ರೀಂಕೋರ್ಟ್ ನಲ್ಲಿ ಮನವಿ ಮಾಡಿದ್ದು, ಆದರೆ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ.

ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ಮಾಡಲು ಸಾಧ್ಯವಿಲ್ಲ. ಮೊದಲಯ ರಿಜಿಸ್ಟ್ರಾರ್ ಅರ್ಜಿ ಪರಿಶೀಲನೆ ನಡೆಸಲಿ. ಬಳಿಕ ಅರ್ಜಿ ವಿಚಾರಣೆ ನಡೆಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಸುಪ್ರೀಂಕೋರ್ಟ್  ತಿಳಿಸಿದೆ. ಹೀಗಾಗಿ ಅರ್ನಹ ಶಾಸಕರಿಗೆ ಹಿನ್ನೆಡೆಯಾಗಿದೆ.

ಹಿಂದಿನ ಸಮ್ಮಿಶ್ರ ಸರ್ಕಾರದ ವಿರುದ್ದ ಅಸಮಾಧಾನಗೊಂಡು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 17 ಮಂದಿ ಶಾಸಕರನ್ನ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿ ಆದೇಶ ನೀಡಿದ್ದರು. ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಗೆ ಅರ್ಜಿಸಲ್ಲಿಸಿದ್ದರು.

Rebel mlas case: Supreme Court said approach registry for urgent listing ..was mentioned b4 anthr bench as Cji is busy in Ayodhya Constitution bench

Key words: Supreme Court – Disqualified- MLAs- petition-hearing