ಯುಪಿಯಲ್ಲಿ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ನೀಡಲು ಸುಪ್ರೀಂ ನಕಾರ: 3 ದಿನಗಳೊಳಗೆ ಅಫಿಡೆವಿಟ್ ಸಲ್ಲಿಸುವಂತೆ ಸೂಚನೆ.

ನವದೆಹಲಿ,ಜೂನ್,16,2022(www.justkannada.in): ಉತ್ತರ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳ ಮೇಲೆ ನಡೆಸುತ್ತಿರುವ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು ಈ ಸಂಬಂಧ 3 ದಿನಗಳೊಳಗೆ ಅಫಿಡೆವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ  ಸೂಚನೆ ನೀಡಿದೆ.

ಜಮಿಯತ್ ಉಲೇಮಾ-ಎ-ಹಿಂದ್  ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಸುಪ್ರೀಂಕೋರ್ಟ್, ಬುಲ್ಡೋಜರ್ ಕಾರ್ಯಾಚರಣೆಗೆ  ನೀಡಲು ನಿರಾಕರಿಸಿದೆ. ಕಾರ್ಯಾಚರಣೆ ತಡೆಹಿಡಿಯಲು ಸಾಧ್ಯವಿಲ್ಲ. ಕಾನೂನಿನಂತೆ ಕಾರ್ಯಾಚರಣೆ ನಡೆಯುತ್ತಿದೆ. ಯೋಗಿ ಸರ್ಕಾರ ಎಲ್ಲೂ ಕಾನೂನು ಉಲ್ಲಂಘಿಸಿಲ್ಲ ಎಂದು ತಿಳಿಸಿದೆ.

ಆದ್ರೆ ಕಾರ್ಯಚರಣೆ ವೇಳೆ ಕಾನೂನು ಪ್ರಕ್ರಿಯೆ ಪಾಲಿಸಬೇಕು. ಕಾನೂನು ಪಾಲಿಸದೆ ಯಾವುದೇ ಕಟ್ಟಡ ಕೆಡುವಂತಿಲ್ಲ. ಯಾವುದೇ ಕಟ್ಟಡ ಅಥವಾ ಮನೆ ಧ್ವಂಸಗೊಳಿಸಬೇಕಾದರೆ ಏಕಾಏಕಿ ಮಾಡುವಂತದ್ದಲ್ಲ. ಇಂತಹ ವಿಷಯಗಳಲ್ಲಿ ಕಾನೂನು ಪಾಲಿಸುವುದು ಅತ್ಯಗತ್ಯ. 3 ದಿನಗಳೊಳಗೆ ಅಫಿಡೆವಿಟ್ ಸಲ್ಲಿಸುವಂತೆ  ಸೂಚನೆ ನೀಡಿದೆ.

Key words: Supreme court- bulldozer-operation-uttar pradesh