ನಾಳೆ ಭಾರತ್ ಬಂದ್ ಗೆ ಖಾಸಗಿ ಶಾಲೆಗಳ ಒಕ್ಕೂಟದಿಂದ ಬೆಂಬಲ: ಆನ್ ಲೈನ್ ಕ್ಲಾಸ್ ಇರಲ್ಲ…

kannada t-shirts

ಬೆಂಗಳೂರು,ಡಿಸೆಂಬರ್,7,2020(www.justkannada.in):  ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು  ಆಗ್ರಹಿಸಿ ರೈತ ಸಂಘಟನೆಗಳು ನಾಳೆ ಭಾರತ್ ಬಂದ್ ಗೆ ಕರೆ ನೀಡಿದ್ದು ವಿವಿಧ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ.logo-justkannada-mysore

ಇದೀಗ ನಾಳೆ ರೈತರು ಕರೆ ನೀಡಿರುವ ಭಾರತ ಬಂದ್ ಗೆ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ ಬೆಂಬಲ ನೀಡಿದೆ.

ನಾಳಿನ ಬಂದ್ ಗೆ ಖಾಸಗಿ ಶಾಲೆಗಳು ಬೆಂಬಲ ಸೂಚಿಸಿದ್ದು, ನಾಳೆ ಆನ್ಲೈನ್ ಕ್ಲಾಸ್ ನಡೆಸುವುದಿಲ್ಲ. ಬಂದ್ ಹಿನ್ನಲೆಯಲ್ಲಿ ನಾಳೆ ನಿಗದಿಯಾದ ಪರೀಕ್ಷೆಗಳು ಹೊರತುಪಡಿಸಿ  ನಾಳೆ ಆನ್ಲೈನ್ ಕ್ಲಾಸ್ ನಡೆಯುವುದಿಲ್ಲ. ರೈತರ ಹೋರಾಟ ಬೆಂಬಲಿಸಿ ನಾಳೆ ಆನ್ಲೈನ್ ಕ್ಲಾಸ್ ಬಂದ್ ಮಾಡಲಾಗುವುದು ಎಂದು ಖಾಸಗಿ ಶಾಲೆ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ.support-tomorrow-bharat-bund-private-schools-federation-no-online-class

ಇನ್ನು ಭಾರತ್ ಬಂದ್ ಗೆ  ಓಲಾ ಊಬರ್ ಹಾಗೂ ಆಟೋ ಚಾಲಕರ ಸಂಘ ನೈತಿಕ ಬೆಂಬಲ ಸೂಚಿಸಿವೆ. ಅಂಗನವಾಡಿ ಕಾರ್ಯಕರ್ತೆಯರು ಕೂಡ ಬಂದ್ ಗೆ ಬೆಂಬಲಿಸಿ ಸಾಥ್ ನೀಡಿದ್ದಾರೆ. ಈ ಮಧ್ಯೆ ನಾಳೆ ಕರ್ನಾಟಕದಲ್ಲೂ ಬಂದ್ ಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದೆ.

English summary…

Private Schools Federation supports Bharath Bundh: No online classes tomorrow
Bengaluru, Dec. 7, 2020 (www.justkannada.in): Various associations and unions have expressed their support for the Bharath Bundh tomorrow called by various farmers unions, demanding the Government of India to withdraw the new agricultural laws that are allegedly harmful to farmers.
The Unaided Private Schools Association has also extended its support for tomorrow’s Bharath bundh. Online classes will not be held tomorrow, according to Shashikumar, of the Private Schools Federation.
Ola, Uber, and auto drivers’ association have also extended their moral support to the bundh. While the Anganwadi activists have also announced their support, various farmers unions and Hasiru Sene have also called for Karnataka Bundh tomorrow.support-tomorrow-bharat-bund-private-schools-federation-no-online-class
Keywords: Bharath Bundh/ farmers unions/ Unaided Private Schools Association

Key words: Support –tomorrow- Bharat Bund – Private Schools -Federation-no online- class.

website developers in mysore