ರೈತರ ಬೆಳೆಗೆ ಬೆಂಬಲ ಬೆಲೆ ಹಾಗೂ  ಪರ್ಯಾಯ ಬೆಳೆ ನೀಡಿದ್ರೆ ತಂಬಾಕು ಬೆಳೆ ನಿಷೇಧ- ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ…

ಮೈಸುರು,ನ,13,2019(www.justkannada.in): ರೈತರ ಬೆಳೆಗೆ ಬೆಂಬಲ ಬೆಲೆ ಹಾಗೂ  ಪರ್ಯಾಯ ಬೆಳೆ ನೀಡಿದರೆ ತಂಬಾಕು ಬೆಳೆ ನಿಷೇಧಿಸುತ್ತೇವೆ ಎಂದು  ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಘೋಷಣೆ ಮಾಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಡಗಲಪುರ ನಾಗೇಂದ್ರ,  ತಂಬಾಕು ಬೆಳೆ ಆರೋಗ್ಯಕ್ಕೆ ಹಾನಿಕಾರ ನಿಜ. ಆದರೇ, ಅದನ್ನೇ ಕಸುಬಾಗಿಸಿಕೊಂಡ ಸುಮಾರು 80 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬೀಳಲಿವೆ, ಅಲ್ಲದೇ 56 ಸಾವಿರ ನೋಂದಾಯಿತ ಬೆಳೆಗಾರರಿದ್ದಾರೆ‌  ಇವರೆಲ್ಲರೂ ತಂಬಾಕನ್ನೇ ನಂಬಿ ಜೀವನ ಸಾಗಿಸುತ್ತಿದ್ದು,  ಎರಡು ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಬೆಳೆದಿದ್ದಾರೆ. ಜತೆಗೆ ಬೆಳೆದ ಬೆಳೆಗೆ ಸೂಕ್ತ ಬೆಂಬಲಬೆಲೆ ಇಲ್ಲದೇ ತಂಬಾಕು ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.

ಇನ್ನು ರೈತರು ಈಗಾಗಲೇ ಬ್ಯಾಂಕ್ ಗಳಿಂದ ಪಡೆದ ಸಾಲ ತೀರಿಸಲಾಗದೆ ತಂಬಾಕು ಬೆಳೆಗಾರರ ಸರಣಿ ಆತ್ಮಹತ್ಯೆ ಆರಂಭವಾಗಲಿದೆ. ಹೀಗಾಗಿ ರೈತರಿಗೆ ಸೂಕ್ತ ಪರ್ಯಾಯ ಬೆಳೆ ಮಾರ್ಗೋಪಾಯ ಸೂಚಿಸಿದ ನಂತರವೇ ತಂಬಾಕು ಬೆಳೆ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಅದರ ಹೊರತಾಗಿ ರೈತರ ಮೇಲಿನ ದಬ್ಬಾಳಿಕೆ ನೀತಿಯನ್ನು ಸಹಿಸುವುದಿಲ್ಲ. ಈ ಬಗ್ಗೆ ನ‌.18ರಂದು ಪಿರಿಯಾಪಟ್ಟಣದಲ್ಲಿ ತಂಬಾಕು ಬೆಳೆಗಾರರ ಸಭೆ ಆಯೋಜನೆ ಮಾಡಲಾಗಿದೆ ಎಂದು  ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

Key words: Support – Farmers- Alternative Crop- ban-Tobacco-Badagalpur Nagendra.