ಕಲ್ಬುರ್ಗಿ, ವಿಜಯಪುರದಲ್ಲಿ ಮೌಢ್ಯಾಚರಣೆ: ಮಕ್ಕಳನ್ನ ಮಣ್ಣಲ್ಲಿ ಹೂತಿಟ್ಟ ಪೋಷಕರು…

ಕಲಬುರ್ಗಿ,ಡಿ,26,2019(www.justkannada.in):  ಇಂದು ನಭೋ ಮಂಡಲದಲ್ಲಿ ವಿಸ್ಮಯವಾಗಿ ಕಂಕಣ ಸೂರ್ಯಗ್ರಹಣ ಗೋಚರವಾಗಿದ್ದು ಜನರೆಲ್ಲರೂ ಕೌತುಕದಿಂದ ಅದನ್ನ ನೋಡಿ ಕಣ್ತುಂಬಿಕೊಂಡಿದ್ದಾರೆ. ಆದರೆ ಸೂರ್ಯಗ್ರಹಣದ ವೇಳೆ ಕಲ್ಬುರ್ಗಿ ಮತ್ತು ವಿಜಯಪುರದಲ್ಲಿ ಮೌಢ್ಯಾಚರಣೆಯೊಂದು ನಡೆದಿದೆ.

ಹೌದು ಕಲಬುರ್ಗಿ ತಾಲೂಕಿನ ತಾಜಾಸುಲ್ತಾನಪುರದಲ್ಲಿ ಮೂಢನಂಬಿಕೆಯಿಂದ ಮಕ್ಕಳನ್ನು ಕುತ್ತಿಗೆವರೆಗೆ ಮಣ್ಣಿನಲ್ಲಿ ಹೂತು ಹಾಕಿದ್ದಾರೆ. ಗ್ರಹಣದ ವೇಳೆ ಮಕ್ಕಳನ್ನ ಹೂತಿಟ್ಟರೇ ಒಳ್ಳೆಯದಾಗುತ್ತದೆ ಎಂಬುದು ಅವರ ನಂಬಿಕೆ ಹೀಗಾಗಿ ಮಕ್ಕಳನ್ನ ಪೋಷಕರು  ಕುತ್ತಿಗೆವರೆಗೆ ಹೂತಿದ್ದಾರೆ.

ಇನ್ನು ಕಲ್ಬುರ್ಗಿಯ ಚಿಂಚೋಳಿ ತಾಲ್ಲೂಕಿನ ಐನ್ನೊಳ್ಳಿಯಲ್ಲಿ  ನಾಲ್ವರು ದಿವ್ಯಾಂಗ ಮಕ್ಕಳನ್ನ  ತಿಪ್ಪೆಯಲ್ಲಿ ಹೂತಿದ್ದಾರೆ. ಈ ರೀತಿ ಮಾಡಿದರೇ ಮಕ್ಕಳು ಸರಿ ಹೋಗುತ್ತದೆ ಎಂದು ಅಲ್ಲಿನ ಜನರು ನಂಬಿದ್ದಾರೆ. ಇನ್ನೊಂದೆಡೆ ವಿಜಯಪುರದ ಇಂಡಿ ತಾಲ್ಲೂಕಿನ ಬಿ.ಕೆ ಗ್ರಾಮದಲ್ಲೂ ಪೋಷಕರು ಮಕ್ಕಳನ್ನ ಕುತ್ತಿಗೆವರೆಗೆ ಮಣ್ಣಿನಲ್ಲಿ ಹೂತಿದ್ದು ಜನರು ಇದನ್ನ  ನೋಡಲು ಮುಗಿಬಿದ್ದರು.

ಗ್ರಹಣದ ವೇಳೆಯಲ್ಲಿ ಈ ರೀತಿ ಮಾಡಿದರೆ ಮಕ್ಕಳಿಗೆ  ಒಳ್ಳೆಯದಾಗಲಿದೆ. ಹಾಗಾಗಿ ಕುತ್ತಿಗೆವರೆಗೆ ಮಣ್ಣಿನಲ್ಲಿ ಹೂಳುವಂತೆ ಹಿರಿಯರು ನೀಡಿದ ಸಲಹೆ ಮೇರೆಗೆ ಈ ರೀತಿ ಮಾಡಲಾಗಿದೆ. ಮೂಢನಂಬಿಕೆಯಿಂದ ಮಕ್ಕಳನ್ನು ಮಣ್ಣಿನಲ್ಲಿ ಹೂತಿಟ್ಟಿದ್ದಾರೆ.

Key words: Superstition- Kalburgi –Vijayapura-Parents – children’s- soil.