ಕನ್ನಡಿಗ ಮಯಾಂಕ್ ಅಗರ್ ವಾಲ್ ಪರ ಸುನೀಲ್ ಗವಾಸ್ಕರ್‌ ಬ್ಯಾಟಿಂಗ್

Promotion

ಬೆಂಗಳೂರು, ನವೆಂಬರ್ 20, 2019 (www.justkannada.in): ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್‌ ಮಯಾಂಕ್ ಅಗರ್ ವಾಲ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಮಯಾಂಕ್ ಅಗರ್ವಾಲ್ ಅವರು ಮುಂದಿನ ವರ್ಷವೂ ತನ್ನ ಬ್ಯಾಟಿಂಗ್ ಲಯ ಮುಂದುವರಿಸಲಿದ್ದಾರೆಂದು ಸುನೀಲ್ ಗವಾಸ್ಕರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಬಾಂಗ್ಲಾದೇಶ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ 243 ರನ್ ಗಳಿಸಿದ್ದರು. ಇದು ಅವರ ವೃತ್ತಿ ಜೀವನದ ವೈಯಕ್ತಿಕ ಅತಿ ಹೆಚ್ಚು ರನ್ ಆಗಿತ್ತು.

ಇತ್ತೀಚೆಗೆ ಬಿಡುಗಡೆಯಾಗಿದ್ದ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮಯಾಂಕ್ 11ನೇ ಸ್ಥಾನ ಪಡೆಯುವ ಮೂಲಕ ವೃತ್ತಿ ಜೀವನದ ಶ್ರೇಷ್ಠ ಕ್ರಮಾಂಕ ಪಡೆದಿದ್ದಾರೆ.