ಪುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಕೊರೊನಾ ಸೋಂಕು

Promotion

ಬೆಂಗಳೂರು, ಮಾರ್ಚ್ 12, 2021 (www.justkannada.in): 

ಭಾರತ ಪುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಕೊರೊನಾ ಸೋಂಕು ದೃಢಪಟ್ಟಿದೆ.

ಈ ವಿಷಯವನ್ನು ಸ್ವತಃ ಸುನಿಲ್ ಛೆಟ್ರಿ ಸ್ಪಷ್ಟಪಡಿಸಿದ್ದಾರೆ. ಸದ್ಯ ನನ್ನ ಆರೋಗ್ಯ ಉತ್ತಮವಾಗಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಶೀಘ್ರದಲ್ಲೇ ಮತ್ತೆ ಸಹಜ ಸ್ಥಿತಿಗೆ ಮರಳುವ ಮೂಲಕ ಮೈದಾನಕ್ಕೆ ಇಳಿಯುವುದಾಗಿ ಚೆಟ್ರಿ ತಿಳಿಸಿದ್ದಾರೆ.

35 ವರ್ಷದ ಛೆಟ್ರಿ ಇತ್ತೀಚೆಗೆ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ನ ಏಳನೇ ಋತುವಿನಲ್ಲಿ ಬೆಂಗಳೂರು ಎಫ್‌ಸಿ ಪರ ಆಡಿದ್ದರು.