ಇಂದು ಸನ್ ರೈಸರ್ಸ್ ಹೈದರಾಬಾದ್- ಕಿಂಗ್ಸ್ ಪಂಜಾಬ್ ಸೆಣೆಸಾಟ ‘ವಿನ್ನಿಂಗ್’ ಫೈಟ್

Promotion

ಬೆಂಗಳೂರು, ಏಪ್ರಿಲ್ 21, 2021 (www.justkannada.in): ಇಂದು ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ ಪಂಜಾಬ್ ಸೆಣೆಸಾಟ ನಡೆಯಲಿದೆ.

ಎರಡೂ ತಂಡಗಳೂ ಸೋಲಿನ ಕಹಿ ಅನುಭವಿಸುತ್ತಿದ್ದು, ಈ ಪಂದ್ಯದಲ್ಲಿ ಗೆಲುವಿನ ದಾರಿಗೆ ಮರಳಲು ತಯಾರಿ ನಡೆಸಿವೆ.

ಸೋಲಿನಿಂದಾಗಿ ಕೆಎಲ್ ರಾಹುಲ್ ನಾಯಕತ್ವದ ಬಗ್ಗೆ ಟೀಕೆಗಳೂ ಕೇಳಿಬಂದಿವೆ. ಹೀಗಾಗಿ ಗೆಲುವಿನತ್ತ ತಂಡವನ್ನು ಕೊಂಡೊಯ್ಯಬೇಕಾದ ಜವಾಬ್ದಾರಿ ಕೆಎಲ್ ಮೇಲಿದೆ. ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಕೂಡ ಇದೇ ಸ್ಥಿತಿಯಲ್ಲಿದ್ದಾರೆ.

ಎರಡೂ ತಂಡಗಳೂ ಅಂಕಪಟ್ಟಿಯಲ್ಲಿ ಕೊನೆಯ ಎರಡು ಕ್ರಮಾಂಕದಲ್ಲಿವೆ. ಇಂದಿನ ಪಂದ್ಯ ಸಂಜೆ 3.30ಕ್ಕೆ ಆರಂಭವಾಗಲಿದೆ.