ಸುಮಲತಾ ಅಂಬರೀಶ್ ಮಂಡ್ಯದ ಗೌಡ್ತಿ, ಸೊಸೆ ಎಂದು ನಿರೂಪಿಸಿದ್ದೀರಿ- ಎಲ್‌.ಆರ್‌ ಶಿವರಾಮೇಗೌಡರಿಗೆ ಸ್ವಾಭಿಮಾನಿ ಸಮಾವೇಶದಲ್ಲಿ ನಟ ದೊಡ್ಡಣ್ಣ ಟಾಂಗ್…

Promotion

ಮಂಡ್ಯ,ಮೇ,29,2019(www.justkannada.in):  ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಸುಮಲತಾ ಅಂಬರೀಶ್ ಮಂಡ್ಯದ ಗೌಡ್ತಿ, ಮಂಡ್ಯದ ಸೊಸೆ ಎಂದು ನಿರೂಪಿಸಿದ್ದೀರಿ ಎಂದು ಹಿರಿಯ ನಟ ದೊಡ್ಡಣ್ಣ ಎಲ್‌.ಆರ್‌ ಶಿವರಾಮೇಗೌಡರಿಗೆ ಟಾಂಗ್ ಕೊಟ್ಟಿದ್ದಾರೆ.

ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಕೃತಜ್ಞತಾ ಸಮಾವೇಶ ನಡೆಯುತ್ತಿದ್ದು ಸಮಾವೇಶಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಚಾಲನೆ ನೀಡಿದರು.  ಸಮಾವೇಶಕ್ಕೆ ಚಾಲನೆ ಸಿಕ್ಕ ಬಳಿಕ ಮಾತನಾಡಿದ ಹಿರಿಯ ನಟ ದೊಡ್ಡಣ್ಣ, ಸುಮಲತಾ ಅವರು ಮಂಡ್ಯದ ಸೊಸೆ, ಈ ಊರಿನ ಮಗಳು ಅಂತ ಲೋಕಸಭಾ ಚುನಾವಣೆ ವೇಳೆಯಲ್ಲಿ ತೋರಿಸಿದ್ದೀರಿ. ಅಂಬರೀಶ್‌ ಎಂದಿಗೂ ಅಮರ, ಆತ ನಮ್ಮೊಂದಿಗೆ ಸದಾಕಾಲ ಇರುತ್ತಾನೆ, ಆತ ಮಾಡಿರುವ ಸಹಾಯ ನನಗೆ ಮಾತ್ರ ಗೊತ್ತು, ಆತ ಯಾರಿಗೆ ಏನೇ ಸಹಾಯ ಮಾಡಿದರು .ತನ್ನ ಹೆಸರು ಬಾರದೇ ಇರುವ ಹಾಗೇ ನೋಡಿಕೊಳ್ಳುತ್ತಿದ್ದ. ಅಂಬರೀಶ್ ಎಂದೆಂದಿಗೂ ನಮ್ಮ ಮನಸ್ಸಿನಲ್ಲಿ ಇರ್ತಾರೆ ಎಂದು ನುಡಿದರು.

ಅಂಬಿ ಮೊದಲ ಹೆಸರು ಅಮರನಾಥ್ ಅಂತಾ ಇತ್ತು. ನಂತರ ಪುಟ್ಟಣ್ಣ ಕಣಗಾಲ್ ಅಂಬರೀಶ್ ಎಂದು ಹೆಸರಿಟ್ಟರು. ನಂತರ ಅಂಬರೀಶ್ ಎಂದೇ ಖ್ಯಾತಿ ಗಳಿಸಿದರು ಎಂದರು.

ನಂತರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡಿ, ಮಂಡ್ಯದ ಜನತೆ ಮಹಿಳೆಯ ಮೌಲ್ಯವನ್ನ ದೇಶಕ್ಕೆ ತೋರಿಸಿದ್ದೀರಿ.  ಸ್ವಾಭಿಮಾನಿ ಎಂಬುವುದು  ಜೀವನದ ಪದ ಬಳಕೆಯಷ್ಟೆ. ಆದರೆ ಅದರ ಶಕ್ತಿ ಏನು ಎಂಬುದನ್ನ ಸುಮಲತಾ ಅವರನ್ನ ಗೆಲ್ಲಿಸುವ ಮೂಲಕ ಮಂಢ್ಯ ಜನತೆ ತೋರಿಸಿದ್ದೀರಿ. ಅಂಬರೀಶ್ ಎಂದೆಂದಿಗೂ ನಮ್ಮ ಮನಸ್ಸಿನಲ್ಲಿ ಇರುತ್ತಾರೆ ಎಂದು ನುಡಿದರು.

Key words: #Sumalatha Ambarish  #demonstrated #actordoddanna