ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಭೇಟಿಯಾದ ನೂತನ ಸಂಸದೆ ಸುಮಲತಾ

ಬೆಂಗಳೂರು:ಮೇ-26:(www.justkannada.in) ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್‌ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚುನಾವಣೆಯಲ್ಲಿ ಬೆಂಬಲಿಸಿದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಬೆಂಗಳೂರಿನ ಡಾಲರ್ಸ್‌ ಕಾಲೋನಿಯಲ್ಲಿರುವ ನಿವಾಸಗ್ಗೆ ಆಗಮಿಸಿ, ಯಡಿಯೂರಪ್ಪ ಅವರನ್ನು ಭೇಟಿಯಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ನನಗೆ ಬೆಂಬಲ ನೀಡಿರುವ ಬಿಜೆಪಿಗೆ ಧನ್ಯವಾದ ಸಲ್ಲಿಸಲು ಹಾಗೂ ಲೋಕ್ಜಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ನನ್ನ ಕಡೆಯಿಂದ ಅಭಿನಂದನೆ ಸಲ್ಲಿಸಲು ಬಂದಿದ್ದೆ ಎಂದರು.

ಇನ್ನು ನನಗೆ ಐತಿಹಾಸಿಕ ಗೆಲ್ವು ತಂದುಕೊಟ್ಟಿದ್ದು ಮಂಡ್ಯದ ಜನ. ಎಲ್ಲಾ ಪಕ್ಷಗಳು ನನ್ನ ಪರ ನಿಂತಿದ್ದವು. ನನ್ನ ಗೆಲುವಿಗೆ ಯಾರು ಕಾರಣಕರ್ತರು ಅವರೆಲ್ಲರಿಗೂ ನನ್ನ ಧನ್ಯವಾದಗಳು ಎಂದರು.

ಇದೇ ವೇಳೆ ಬಿಜೆಪಿ ಸೇರ್ಪಡೆಯಾಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ಪಕ್ಷೇತರವಾಗಿ ಗೆದ್ದಾಗ ಪಕ್ಷವೊಂದನ್ನು ಸೇರ್ಪಡೆಯಾಗುವ ಅವಕಾಶ ಸಂವಿಧಾನದಲ್ಲಿ ಇಲ್ಲ, ಬೆಂಬಲ ನೀಡಬಹುದು ಎನ್ನುವುದು ನನಗಿರುವ ಮಾಹಿತಿ. ಇನ್ನು ನನಗೆ ಜನಾಭಿಪ್ರಾಯ ಮುಖ್ಯ, ಮಂಡ್ಯ ಜನರ ಅಭಿಪ್ರಾಯ ಸಂಗ್ರಹ ಮಾಡುತ್ತೇನೆ. ಅವರ ಅಭಿಪ್ರಾಯದಂತೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

ನಾನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ ಮಂಡ್ಯ ಜಿಲ್ಲೆಯ ರೈತರೇ ನನ್ನ ಮೊದಲ ಆಧ್ಯತೆ. ಅದೇ ನನ್ನ ಮೊದಲ ಕರ್ತವ್ಯ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಭೇಟಿಯಾದ ನೂತನ ಸಂಸದೆ ಸುಮಲತಾ
Sumalata ambareesh,BJP,B S Yedyurappa,Meet