ಇನ್ಫೋಸಿಸ್ ಫೌಂಡೇಶನ್‌ ಅಧ್ಯಕ್ಷೆ ಹುದ್ದೆ ತ್ಯಜಿಸುತ್ತಿರುವ ಸುಧಾಮೂರ್ತಿ

Promotion

ಬೆಂಗಳೂರು, ಜನವರಿ 02, 2021 (www.justkannada.in): ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಹುದ್ದೆಯನ್ನುಅಂತಿಮವಾಗಿ ಅದನ್ನು ತ್ಯಜಿಸಲು ಸುಧಾಮೂರ್ತಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಡಿಸೆಂಬರ್ 31ಕ್ಕೆ ತಾನು ಇನ್ಫೋಸಿಸ್ ಫೌಂಡೇಶನ್​ನಿಂದ ನಿವೃತ್ತಿ ಪಡೆಯುವುದಾಗಿ ಸುಧಾ ಮೂರ್ತಿ ಕಳೆದ ವರ್ಷವೇ ಘೋಷಿಸಿದ್ದರು.

ಇನ್ಫೋಸಿಸ್ ಪ್ರತಿಷ್ಠಾನಕ್ಕೆ ಕಳೆದ ಡಿಸೆಂಬರ್ 31ಕ್ಕೆ 25 ವರ್ಷಗಳು ತುಂಬಿದೆ. ಹೀಗಾಗಿ ಬಹಳ ಹಿಂದೆಯೇ ಈ ಕುರಿತು ಸುಧಾಮೂರ್ತಿ ನಿರ್ಧರಿಸಿದ್ದರು ಎನ್ನಲಾಗಿದೆ.

ನಿವೃತ್ತಿ ನಂತರ ತಾನು ಕುಟುಂಬದ ಮೂರ್ತಿ ಫೌಂಡೇಶನ್​ನ ಮುಖ್ಯಸ್ಥರ ಸ್ಥಾನದಲ್ಲಿ ಕುಳಿತು ಇದೇ ಕೆಲಸ ಮುಂದುವರೆಸುವುದಾಗಿ ಸುಧಾಮೂರ್ತಿ ತಿಳಿಸಿದ್ದಾರೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಮ್ಮ ಸಹಾಯ ಮತ್ತು ಕೆಲಸ ನಿರಂತರವಾಗಿ ಮುಂದುವರೆಯುತ್ತಿರುತ್ತದೆ ಎಂದಿದ್ದಾರೆ.