ನಾಳೆ ‘ಫ್ಯಾಂಟಮ್’ ಟೀಂ ನೀಡಲಿದೆ ಬಿಗ್ ನ್ಯೂಸ್ !

Promotion

ಬೆಂಗಳೂರು, ಜನವರಿ 20, 2021 (www.justkannada.in): ಫ್ಯಾಂಟಮ್ ಸಿನಿಮಾದ ಬಗ್ಗೆ ಸುದ್ದಿಯೊಂದು ವೈರಲ್ ಆಗಿದೆ. ಚಿತ್ರದ ಟೈಟಲ್ ಬದಲಾಗಲಿದೆ ಎನ್ನಲಾಗುತ್ತಿದೆ.

ಜನವರಿ 21ರಂದು ಚಿತ್ರದ ಬಗ್ಗೆ ಬಿಗ್ ಅಪ್ ಡೇಟ್ ನೀಡುವುದಾಗಿ ಚಿತ್ರತಂಡ ಬಹಿರಂಗಪಡಿಸಿದೆ. ಈ ಬಗ್ಗೆ ಕಿಚ್ಚ ಅಭಿಮಾನಿಗಳು ಕುತೂಹಲಭರಿತರಾಗಿದ್ದಾರೆ.

ಚಿತ್ರದ ಟೈಟಲ್ ಬದಲಾವಣೆ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.
ಸಿನಿಮಾದ ಟ್ರೈಲರ್ ಮತ್ತು ಹಾಡುಗಳ ರಿಲೀಸ್ ಬಗ್ಗೆಯೂ ಚಿತ್ರತಂಡ ಮಾಹಿತಿ ನೀಡಲೂಬಹುದು ಎನ್ನಲಾಗಿದೆ.