ಲೋಕಸಭೆಯಲ್ಲಿ  ಭರ್ಜರಿ ಗೆಲುವು: ದೆಹಲಿಗೆ ಬರುವಂತೆ ಬಿಜೆಪಿ ಸಂಸದರಿಗೆ ಬುಲಾವ್

Promotion

ನವದೆಹಲಿ,ಮೇ, 23,2019(www.justkannada.in): ಲೋಕಸಭಾ ಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರಳ ಬಹುಮತ ಸಾಧಿಸಿ ಭರ್ಜರಿ ಜಯಭೇರಿ ಬಾರಿಸಿದೆ.

ಈ ನಡುವೆ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆ  ಬಿಜೆಪಿಯ ಸಂಸದರಿಗೆ ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗಳಿಸುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಬಿಜೆಪಿ ಮೈತ್ರಿಕೂಟದ ಸಂಸದೀಯ ಸಭೆ ಮೇ 25 ರಂದು ನಡೆಯಲಿದೆ.

ಬಿಜೆಪಿಯಿಂದ ಆಯ್ಕೆಯಾಗಿರುವ ರಾಜ್ಯದ ಎಲ್ಲ ಸಂಸದರು ಮೇ 25 ರಂದು  ದೆಹಲಿಗೆ ಬರಬೇಕು ಎಂದು ಸೂಚನೆ ನೀಡಿದೆ. ಮೇ 26ರಂದು ನರೇಂದ್ರ ಮೋದಿ ಅವರು ಮತ್ತೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

Key words: Successful victory in the Lok Sabha. Bullow to BJP MPs coming to Delhi

#Lokasbhaelection2019 #result #won #bjp