ಸಿದ್ದಲಿಂಗಪುರ  ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿಪೂಜೆ : ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ

ಮೈಸೂರು,ಡಿಸೆಂಬರ್,20,2020(www.justkannada.in) : ಸಿದ್ದಲಿಂಗಪುರ  ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕೊರೊನಾ ಹಿನ್ನೆಲೆ ಸರಳವಾಗಿ ಷಷ್ಠಿ ಪೂಜೆ. ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ.Teachers,solve,problems,Government,bound,Minister,R.Ashok

ಪ್ರತಿವರ್ಷ ವೈಭವದಿಂದ ನಡೆಯುತ್ತಿದ್ದ ಸುಬ್ರಮಣ್ಯ ಷಷ್ಠಿ ಪೂಜೆಗೆ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಬರುತ್ತಿದ್ದ ಭಕ್ತಾದಿಗಳು. ಈ ಬಾರಿ ಕೊರೊನ ಹಿನ್ನೆಲೆ ಸರಳವಾಗಿ ಆಚರಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಲಾಗಿದೆ.Subrahmanyeswara-Siddalingapura-Shashti Puja-Swami-Temple-Restriction-public-access

ಈ ಬಾರಿ ಷಷ್ಠಿ ಜಾತ್ರಾ ಮಹೋತ್ಸವ ರದ್ದು‌ ಮಾಡಿ ದೇವಾಲಯ ಆವರಣದಲ್ಲಿ ಅರ್ಚಕರಿಂದಲೇ ಪೂಜೆ. ಮುಂಜಾನೆಯೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿ ವಿವಿಧ ಪೂಜೆ. ಮುಂಜಾನೆ ೫ ರಿಂದ ಬೆಳಿಗ್ಗೆ ೭ ರ ವರೆಗೆ ನಡೆದ ಪೂಜಾ ಕೈಂಕರ್ಯ ನಡೆಯಿತು.

ಪೊಲೀಸ್ ಬಿಗಿ ಭದ್ರತೆ

Subrahmanyeswara-Siddalingapura-Shashti Puja-Swami-Temple-Restriction-public-access

ದೇವಾಲದ ಪ್ರವೇಶ ದ್ವಾರ ಮುಚ್ಚಿ ದೇವರಿಗೆ ವಿಶೇಷ ಪೂಜೆ. ಸಾರ್ವಜನಿಕರು ಬಾರದಂತೆ ತಡೆಯಲು ಪೊಲೀಸರಿಂದ ಬಿಗಿ ಭದ್ರತೆ.  ಪೂಜೆ ಮುಗಿಸಿ ದೇವಾಲಯದ ಬಾಗಿಲು ಮುಚ್ಚಿದ ಅರ್ಚಕರು.

Subrahmanyeswara-Siddalingapura-Shashti Puja-Swami-Temple-Restriction-public-accessಸಾರ್ವಜನಿಕರು ದೇವಾಲಯದ ಎದುರು ನಿಲ್ಲಲೂ ಪೊಲೀಸರು ಅವಕಾಶ ನೀಡುತ್ತಿಲ್ಲ. ಹೀಗಾಗಿ, ದೇವಾಲಯಕ್ಕೆ ಪ್ರವೇಶವಿಲ್ಲ ಎಂಬುದನ್ನು ಅರಿಯದೆ ತಂಡೋಪತಂಡವಾಗಿ ಆಗಮಿಸುತ್ತಿರುವ ಭಕ್ತರು ದೇವಾಲಯದ ಎದುರು ಕೈಮುಗಿದು ತೆರಳುತ್ತಿದ್ದಾರೆ.

key words : Subrahmanyeswara-Siddalingapura-Shashti Puja-Swami-Temple-Restriction-public-access