ಕೊರೋನಾಗೆ ಸಬ್ ರಿಜಿಸ್ಟ್ರಾರ್ ಬಲಿ: ಮಗನ ಸಾವಿನ ಸುದ್ಧಿ ತಿಳಿದು ತಾಯಿಯೂ ಮೃತ..

Promotion

ರಾಯಚೂರು,ಆ,1,2020(www.justkannada.in):  ರಾಜ್ಯದಲ್ಲಿ ತಾಂಡವಾಡುತ್ತಿರುವ ಮಹಾಮಾರಿ ಕೊರೋನಾಗೆ ಸಬ್ ರಿಜಿಸ್ಟ್ರಾರ್ ಬಲಿಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.jk-logo-justkannada-logo

ರಾಯಚೂರು ಜಿಲ್ಲೆ ಮಾನ್ವಿಯ ಸಬ್ ರಿಜಿಸ್ಟ್ರಾರ್ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದು,  ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಸಹ ಆಘಾತಕ್ಕೊಳಗಾಗಿ ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ನಡೆದಿದೆ.

ಇತ್ತೀಚೆಗೆ ಸಬ್ ರಿಜಿಸ್ಟ್ರಾರ್​ಗೆ  ಕೊರೋನಾ ಸೋಂಕು ದೃಢಪಟ್ಟಿತ್ತು. ಕೂಡಲೇ ಅವರನ್ನು ರಾಯಚೂರಿನ ಓಪೆಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಉಸಿರಾಟದ ಸಮಸ್ಯೆ ತೀವ್ರವಾಗಿದ್ದರಿಂದ ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು.Sub Registrar- death-Corona-raichur

ಆದರೆ ಸಬ್ ರಿಜಿಸ್ಟ್ರಾರ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು , ಮಗನ ಸಾವಿನ ಸುದ್ದಿ ಕೇಳಿದ ಸಬ್​ ರಿಜಿಸ್ಟ್ರಾರ್ ತಾಯಿಗೆ ಆಘಾತವಾಗಿದ್ದು, ಅವರು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಮೃತ ಸಬ್ ರಿಜಿಸ್ಟ್ರಾರ್​ರ ಅಣ್ಣನಿಗೂ ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ಹೈದ್ರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Key words: Sub Registrar- death-Corona-raichur