ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಸಬ್ ಇನ್ಸ್ ಪೆಕ್ಟರ್ ಹಾಗೂ ಹೆಡ್ ಕಾನ್ಸ್ ಟೇಬಲ್.

Promotion

ಮೈಸೂರು,ಜುಲೈ,5,2022(www.justkannada.in): ಠಾಣೆಯಲ್ಲಿ ಲಂಚ ಪಡೆಯುವ ವೇಳೆ ಸಬ್ ಇನ್ಸ್ ಪೆಕ್ಟರ್ ಹಾಗೂ ಹೆಡ್ ಕಾನ್ಸ್ ಟೇಬಲ್ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ತಲಕಾಡು ಪಿಎಸ್ ಐ ಸಿದ್ದಯ್ಯ, ಹೆಡ್ ಕಾನ್ಸಟೇಬಲ್ ಸತೀಶ್ ಎಸಿಬಿ ಬಲೆಗೆ ಬಿದ್ದವರು. ಎನ್ ಸಿ ಆರ್ ಪ್ರಕರಣ ಮುಕ್ತಾಯಗೊಳಿಸಲು ಟ್ಯಾಕ್ಸಿ ಚಾಲಕನಿಂದ 10 ಸಾವಿರ ರೂ. ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದರು.

ಇಂದು ಠಾಣೆಯಲ್ಲಿ  ಟ್ಯಾಕ್ಸಿ ಚಾಲಕನಿಂದ ಪಿಎಸ್ ಐ 5 ಸಾವಿರ ಹಾಗೂ ಹೆಡ್ ಕಾನ್ಸಟೇಬಲ್ 2.5 ಸಾವಿರ ಲಂಚ ಪಡೆಯುವ ವೇಳೆ ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಎಸ್ಪಿ ಸಜಿತ್ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ತಮ್ಮಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆಯಲ್ಲಿ ಇನ್ಸ್ ಪೆಕ್ಟರ್ ಗಳಾದ ಚಿತ್ ರಂಜನ್,  ಮೋಹನ್ ಕೃಷ್ಣ ಭಾಗಿಯಾಗಿದ್ದರು.

Key words: Sub-inspector -head constable -caught –ACB- trap