ಹೃದಯಾಘಾತದಿಂದ 10ನೇ ತರಗತಿ ವಿದ್ಯಾರ್ಥಿ ಸಾವು.

Promotion

ಶಿವಮೊಗ್ಗ,ಜನವರಿ,11,2023(www.justkannada.in):  ಹೃದಯಾಘಾತದಿಂದ 10ನೇ ತರಗತಿಯ ವಿದ್ಯಾರ್ಥಿ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದೆ. 10ನೇ ತರಗತಿ ವಿದ್ಯಾರ್ಥಿ ಜಯಂತ್ ರಜತಾದ್ರಯ್ಯ ಮೃತ ಬಾಲಕ. ಆನವಟ್ಟಿ ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದ ಜಯಂತ್ ಬೆಳಗ್ಗೆ ಶಾಲೆಗೆ ತೆರಳಲು ರೆಡಿಯಾಗುತ್ತಿದ್ದನು. ಈ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಜಯಂತ್ ನನ್ನು ಎಣ್ಣೆಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಆದರೆ ಅಷ್ಟರಲ್ಲಿ ಜಯಂತ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ  ವೈದ್ಯರು ತಿಳಿಸಿದ್ದಾರೆ. ಮೂರು-ನಾಲ್ಕು ದಿನದ ಹಿಂದಷ್ಟೇ 12 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ನಡೆದಿತ್ತು.

Key words: student -died -heart attack-shimogga