ಶಾಲಾ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿ ಸಾವು: ಆಡಳಿತ ಮಂಡಳಿ ವಿರುದ್ದ ಪೋಷಕರ ಆಕ್ರೋಶ…

ಮೈಸೂರು,ಮೇ,19,2019(www.justkannada.in):  ಶಾಲಾ ಪ್ರವಾಸಕ್ಕೆಂದು ಬಂದಿದ್ದ  ವಿಧ್ಯಾರ್ಥಿ ಸಾವನ್ನಪ್ಪಿದ್ದು ಶಾಲಾ ಆಡಳಿತ ಮಂಡಳಿ ವಿರುದ್ದ ಮೃತ ವಿದ್ಯಾರ್ಥಿ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಬೇಲೂರಿನ ಮೌಂಟ್ ಕಾರ್ಮೆಲ್ ಶಾಲೆಯ ಹೇಮಂತ್ ಮೃತಪಟ್ಟ ವಿಧ್ಯಾರ್ಥಿ.  ಬೇಲೂರಿನ ನಿವಾಸಿ ನಾಗರಾಜ್ ಹಾಗೂ ಜ್ಯೋತಿ ದಂಪತಿಯ ಪುತ್ರ ಹೇಮಂತ್. ನೆನ್ನೆ ಪಿಕ್ ನಿಕ್ ಗೆಂದು ಶಾಲೆಯ ಫಾದರ್ ಪ್ರಕಾಶ್ ಸಾಗರ್ ೧೨ ಮಕ್ಕಳೋಂದಿಗೆ ಬಲುಮುರಿ ಆಗಮಿಸಿದ್ದರು. ಸಂಜೆ ೫ ಗಂಟೆ ಸುಮಾರಿಗೆ ಮೌಂಟ್ ಕಾರ್ಮಲ್ ವಿದ್ಯಾರ್ಥಿ ಹೇಮಂತ್ ಸಾವನ್ನಪ್ಪಿದ್ದಾನೆ.

ಆದರೆ ವಿದ್ಯಾರ್ಥಿ  ಸಾವನ್ನಪ್ಪಿದ್ದರೂ ಪೋಷಕರಿಗೆ ಈ ಬಗ್ಗೆ ಮೌಂಟ್ ಕಾರ್ಮಲ್ ಸಿಬ್ಬಂದಿ ಮಾಹಿತಿ ನೀಡಿರಲಿಲ್ಲ. ಮಗನ ಸಾವನ್ನ ಖುದ್ದು  ಪೋಷಕರೇ ಕಾತ್ರಿ ಪಡಿಸಿಕೊಳ್ಳುವಂತೆ ಆಡಳಿತ ಮಂಡಳಿ ಮಾಡಿದ್ದು, ವಿದ್ಯಾರ್ಥಿ ಸಾವು ಮುಚ್ಚಿ ಹಾಕಲು ಪ್ರಯತ್ನಿಸಿದ್ರಾ ಶಾಲಾ ಆಡಳಿತ ಮಂಡಳಿ ಎಂಬ ಪ್ರಶ್ನೆ ಮೂಡಿದ್ದು  ಆಡಳಿತ ಮಂಡಳಿಯ ನಡೆಗೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧ್ಯಾರ್ಥಿ ದೇಹವನ್ನು ಮೈಸೂರಿನ ಕೆ.ಆರ್. ಶವಗಾರಕ್ಕೆ ತಂದೊಟ್ಟು ಹೇಮಂತ್ ನ ಪೋಷಕರು ಬರುವ ಮುಂಚೆಯೇ ಅಲ್ಲಿಂದ ಫಾದರ್ ಪ್ರಕಾಶ್ ಕಾಲ್ಕಿತ್ತಿದ್ದಾರೆ. ಮಗನ ಸಾವನ್ನ ತಿಳಿಸದ ಫಾದರ್ ಪ್ರಕಾಶ್ ಸಾಗರ್ ಗೆ ಪೋಷಕರು ಮೈ ಚಳಿ ಬಿಡಿಸಿದ್ದಾರೆ. ಮಗನ ಸಾವು ಅಸಹಜ ಎಂದು ಶಾಲೆಯ ಆಡಳಿತ ಮಂಡಳಿ ಮೇಲೆ ದೂರ ದಾಖಲಿಸಲು ಪೋಷಕರು ಮುಂದಾಗಿದ್ದು  ವಿದ್ಯಾರ್ಥಿ ಸಾವಿನ ಕುರಿತು ಕೆ.ಆರ್.ಎಸ್. ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Key words: Student dead when school trip

#crimenews #mysore #school #student