ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ಸಿಗುವವರೆಗೆ ಹೋರಾಟ : ಸಚಿವ ಕೆ.ಎಸ್.ಈಶ್ವರಪ್ಪ

Promotion

ಬೆಂಗಳೂರು,ಅಕ್ಟೋಬರ್,11,2020(www.justkannada.in) :  ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ಸಿಗುವವರೆಗೆ ಹೋರಾಟ. ಕೇಂದ್ರ ಸಚಿವರು, ಗೃಹ ಸಚಿವ ಅಮಿತ್ ಶಾ ಎಲ್ಲರನ್ನೂ ಬಳಸಿಕೊಂಡು ಎಸ್ ಟಿ ಮೀಸಲಾತಿ ಸಿಗುವವರೆಗೆ ಹೋರಾಟ ಮಾಡ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.jk-logo-justkannada-logo

ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲು ಕೊಡುವುದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕುರುಬ ಸಮುದಾಯದ ಬೃಹತ್ ಸಭೆಯಲ್ಲಿ ಅವರು ಮಾತನಾಡಿದರು.

೧೯೩೫ ರಿಂದ ಸತತ ಹೋರಾಟ ನಡೆದರೂ ಕೂಡ ಇದುವರೆಗೆ ಮೀಸಲಾತಿ ಸಿಕ್ಕಿಲ್ಲ. ರಾಜ್ಯದಿಂದ ಕೇಂದ್ರಕ್ಕೆ, ಕೇಂದ್ರದಿಂದ ರಾಜ್ಯಕ್ಕೆ ಫೈಲ್ ಹೋಗ್ತಿತ್ತು ಅಷ್ಟೇ.  ಆದರೆ, ಈಗ ನಾನು ಕೇಂದ್ರ ಸಚಿವರು, ಗೃಹ ಸಚಿವ ಅಮಿತ್ ಶಾ ಎಲ್ಲರನ್ನೂ ಬಳಸಿಕೊಂಡು ಎಸ್ ಟಿ ಮೀಸಲಾತಿ ಸಿಗುವವರೆಗೆ ಹೋರಾಟ ಮಾಡ್ತೇನೆ ಎಂದರು.

ಕುರುಬ ಸಮುದಾಯದ ನಾಲ್ವರು ಸ್ವಾಮಿಜಿಗಳ ನೇತೃತ್ವದಲ್ಲಿ ಈ ಹೋರಾಟ ಮುಂದುವರೆಯುತ್ತದೆ. ಸಮುದಾಯ ವಿಷಯ ಬಂದಾಗ ಮೂರು ಪಕ್ಷಗಳ ನಾಯಕರು ಒಂದಾಗಬೇಕು. ಇಲ್ಲಿ ಹಾಲಿ, ಮಾಜಿ ಸಚಿವರು ಇದ್ದಾರೆ. ಮುಂದೆ ಸಚಿವರು ಆಗುವಂತಹವರು ಬಂದಿದ್ದಾರೆ. ರಾಜಕೀಯ ನಾಯಕರುಗಳು ನೇತೃತ್ವ ವಹಿಸಿಲ್ಲ. ಸಮುದಾಯದ ಹೋರಾಟ ಸಂದರ್ಭದಲ್ಲಿ ರಾಜಕಾರಣ ಮಾಡಬಾರದು. ರಾಜಕಾರಣವನ್ನು ಚಪ್ಪಲಿ ಬಿಡೋ ಜಾಗದಲ್ಲಿ ಬಿಟ್ಟು ಬನ್ನಿ ಎಂದು ಹೇಳಿದರು.

ಸಮುದಾಯದ ಆಗ್ರಹ, ಹೋರಾಟಕ್ಕೆ ಸಿದ್ದರಾಮಯ್ಯಬಾಹ್ಯ ಬೆಂಬಲ ಕೊಟ್ಟಿದ್ದಾರೆ. ಸಭೆಗೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಕುರುಬ ಸಮಾಜದ ಜನಪ್ರತಿನಿಧಿಗಳು . ಸಮುದಾಯದ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸದಸ್ಯರು ಭಾಗವಹಿಸಿದ್ದಾರೆ ಎಂದು ತಿಳಿಸಿದರು.

Struggle-ST Reservation-shepherd-community- Minister-KS Eshwarappa

ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಕುರುಬರು ಒಟ್ಟಾಗಿ ಸೇರಿದಾಗ ಯಾವತ್ತು ಅನ್ಯಾಯ ಆಗಿಲ್ಲ. ಹಿಂದೆ ನಾವೆಲ್ಲರೂ ಒಟ್ಟಾಗಿ ಸೇರಿದ್ಕಕ್ಕೆ ಸಿದ್ದರಾಮಯ್ಯ ಸಿಎಂ ಆದ್ರು. ಇವಾಗ ನಾವೆಲ್ಲರೂ ಒಟ್ಟಾಗಿದ್ದೇವೆ ಈ ಹೋರಾಟಕ್ಕೆ ಎಲ್ಲರದ್ದು ಒಂದೇ ಧ್ವನಿ ಇರಬೇಕು. ಎಲ್ಲಿಯೂ ಭಿನ್ನಾಭಿಪ್ರಾಯ ಬೇಡ ಎಂದರು.

ಸಂವಿಧಾನ ಬದ್ದವಾಗಿ ಸಿಗುವ ಹಕ್ಕು. ನಾವು ಈ ಹೋರಾಟ ರೂಪಿಸಬೇಕು ಅಂತ ಸಿದ್ದರಾಮಯ್ಯ ಗೆ ಹೇಳಲಾಗಿದೆ. ಅವರದು ಸಂಪೂರ್ಣ ಸಹಕಾರವಿದೆ. ನೀವು ಮುಂದೂವರೆಯಿರಿ ಅಂತ ಹೇಳಿದ್ದಾರೆ. ನಾವು ಒಗ್ಗಟ್ಟಾಗಿ ಹೋದ್ರೆ ಯಶಸ್ವಿಯಾಗುತ್ತೇವೆ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಸರ್ಕಾರದ ಮುಂದೆ ಮನವಿ ಮಾಡುತ್ತೇವೆ.  ಸರ್ಕಾರ ಆಗಲ್ಲ ಎಂದರೆ ಮುಂದಿನ ಹೋರಾಟ ಅನಿವಾರ್ಯ. ಸರ್ಕಾರದಲ್ಲಿ ಸಚಿವರಾಗಿದ್ರು ಈಶ್ವರಪ್ಪ ಬೀದಿಗೆ ಬಂದು ಸಮುದಾಯ ಪರ ನಿಂತಿದ್ದಾರೆ. ಮಠ, ಮುಖ್ಯಮಂತ್ರಿಯಾಗಲು ಸಮುದಾಯ ಒಂದಾಗಿದ್ದು ಕಾರಣ. ಮುಂದೆ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಎಸ್ಟಿ ಹೋರಾಟ ಅಗತ್ಯ ಎಂದರು.

ಈ ಹೋರಾಟ ನಮ್ಮ ಹಕ್ಕು ಪಡೆಯಲು. ಬೇರೆಯವರ ಹಕ್ಕುಗಳ ವಿರುದ್ಧ ಹೋರಾಟ ಅಲ್ಲ. ಹಿಂದುಳಿದ ವರ್ಗಗಳಿಗೆ ಧ್ವನಿ ಕೊಟ್ಟ ಸಿಎಂ ಇದ್ರೆ ಅದು ದೇವರಾಜು ಅರಸು ಮಾತ್ರ. ಸಮುದಾಯ ನಮ್ಮ ಹಳೆಯ ಸಂಸ್ಕೃತಿ  ಮರೆತಿದೆ ಎಂದು ಹೇಳಿದರು.

Struggle-ST Reservation-shepherd-community- Minister-KS Eshwarappa

ಸಿದ್ದರಾಮಾನಂದಪುರಿ ಸ್ವಾಮೀಜಿ ಮಾತನಾಡಿ, ಗೊಂಡ ಸರ್ಟಿಫಿಕೇಟ್ ಪಡೆಯಲು ಬಂದವರನ್ನ ಹೊರಗೆ ಹಾಕಿದ ಮಂತ್ರಿಗಳ ಬಗ್ಗೆಯೂ ನನಗೆ ಗೊತ್ತು. ಕುರುಬರ ನ್ಯಾಯಕ್ಕೆ ಯಾರಿಗೂ ಅವಕಾಶ ಮಾಡಿಕೊಡುವುದು ಬೇಡ. ನಮ್ಮ  ಸಮುದಾಯದಿಂದ ಬೇರೆ ಸಮುದಾಯದವರು ಲಾಭ ಮಾಡಿಕೊಂಡರು. ಎಸ್ ಟಿ ಹೋರಾಟದಲ್ಲಿ ಆದು ಆಗದಿರಲಿ. ಮಠದ ಕುರಿಗಳು ಸೇರಿ ರಾಜ್ಯದಲ್ಲಿ ಕುರಿಗಾರರು ಮಳೆಯಿಂದ ಬಹಳ ನಷ್ಟ ಉಂಟಾಗಿದೆ. ಇಲ್ಲಿಯೇ ಕುರುಗಾಯಿಗಳಿಗೆ ಪರಿಹಾರ ವಿಚಾರದಲ್ಲಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಗೆ ಹಾಗೂ  ಯಡಿಯೂರಪ್ಪ ಸಿಎಂ. ಈಶ್ವರಪ್ಪ  ಸಚಿವರಾಗುವುದಕ್ಕೆ ನಾನು, ಎಚ್.ವಿಶ್ವನಾಥ್, ಬೈರತಿ ಬಸವರಾಜ್, ಶಂಕರ್ ಕಂಬಳಿ ಬೀಸಿದ್ದರಿಂದ ಸಾಧ್ಯವಾಯಿತು. ನಮ್ಮ ತ್ಯಾಗದ ಫಲವಾಗಿ ಸರ್ಕಾರ ರಚನೆ ಆಗಿದೆ. ಯಡಿಯೂರಪ್ಪ ಸಿಎಂ ಆಗಿದ್ದಾರೆ. ಹೀಗಾಗಿ ನಮ್ಮ ಸಮುದಾಯದ ಒತ್ತಾಯ ಪರಿಗಣಿಸಬೇಕು ಎಂದರು.

ಕಾಗಿನೆಲೆ ಮಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಎಸ್ಟಿ ಮೀಸಲಾತಿ ಹೋರಾಟ ನಿಲ್ಲುವುದಿಲ್ಲ. ಹೋರಾಟ ಸಂಬಂಧ ವಿಭಾಗ ಮಟ್ಟದ ಸಮಾವೇಶ ಆಯೋಜಿಸಲಾಗುವುದು. ನವೆಂಬರ್ 22 ರಂದು ಬೆಳಗಾವಿ ವಿಭಾಗದಲ್ಲಿ,  ಮೈಸೂರು ವಿಭಾಗದಲ್ಲಿ ಡಿ.6 ರಂದು, ಡಿ.20 ರಂದು ಕಲಬುರ್ಗಿ ವಿಭಾಗ, ಜನವರಿ 3 ರಂದು ಬೆಂಗಳೂರು ವಿಭಾಗದ ಸಮಾವೇಶ ನಡಸಲಾಗುವುದು. ಸಮಾವೇಶಗಳ ಮಧ್ಯೆಯೇ ಈಶ್ವರಪ್ಪ ನೇತೃತ್ವದಲ್ಲಿ ದೆಹಲಿಗೆ ಪ್ರಮುಖರ ನಿಯೋಗ ಹೋಗಲಿದೆ ಎಂದು ಮಾಹಿತಿ ನೀಡಿದರು.

ಕೇಂದ್ರದ ಎದುರು ಬೇಡಿಕೆ ಮುಂದಿಡಲು ಈಶ್ವರಪ್ಪ ನೇತೃತ್ವದಲ್ಲಿ ನಿಯೋಗ

ಜನವರಿ 15 ರಂದು ನಾಲ್ವರು ಹಿರಿಯ ಸ್ವಾಮೀಜಿಗಳು ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಬರುವರು. ಜನವರಿ 15 ರಂದು ಎಸ್ಟಿ ಮೀಸಲಾತಿಗಾಗಿ ಸ್ವಾಮೀಜಿಗಳ ಪಾದಯಾತ್ರೆ ಫೆಬ್ರವರಿ 7 ಕ್ಕೆ ಬೆಂಗಳೂರಿಗೆ ಆಗಮನ. ಬೆಂಗಳೂರಿನಲ್ಲಿ 10 ಲಕ್ಷ ಜನ ಸೇರಿಸಿ ಬೃಹತ್ ಸಮಾವೇಶ. ಪ್ರತಿದಿನ 20 ಕೀಮೀ ಕಾಲ್ನಡಿಗೆ.  ನಾನು ಪಾದಯಾತ್ರೆ ಅಂದ ತಕ್ಷಣ ಈಶ್ವರಪ್ಪ ಮತ್ತು ಹಲವರು ಸ್ವಾಮೀಜಿ ಕಷ್ಟ ಅಂದ್ರು. ಅವರಿಗೆಲ್ಲ ಹೆಂಡ್ತಿ ಮಕ್ಕಳು ಇದ್ದಾರೆ. ಸ್ವಾಮೀಜಿಗಳಿಗೆ ಸಮುದಾಯವೇ ಎಲ್ಲ. ನಾವು ನಡೆಯುತ್ತೇವೆ ನೀವು ನಮ್ಮನ್ನ ಚೆನ್ನಾಗಿ ನೋಡಿಕೊಂಡ್ರೆ ಸಾಕು. ಬೆಳಿಗ್ಗೆ ಹತ್ತು ಕೀಮೀ ಸಂಜೆ ಹತ್ತು ಕೀಮೀ ನಡೆಯುತ್ತೇವೆ ಎಂದು ಕಾಗಿನೆಲೆ ಗುರುಪೀಠದ ಜಗದ್ಗುರುಗಳಾದ ಶ್ರೀ  ನಿರಂಜನಾನಂದಪುರಿ ಮಹಾಸ್ವಾಮಿಗಳು ತಿಳಿಸಿದರು.

ಸಭೆಯಲ್ಲಿ ಪ್ರದೇಶ ಕುರುಬರ ಸಂಘ ಪ್ರಧಾನ ಕಾರ್ಯದರ್ಶಿ ಕೆ.ಮುಕುಡಪ್ಪ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಶಾಸಕ ಬಂಡೆಪ್ಪ ಖಾಶ್ಯಂಪೂರ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ವಿಧಾನಪರಿಷತ್ ಸದಸ್ಯರಾದ ಆರ್.ಶಂಕರ್, ರಘುನಾಥ ರಾವ್ ಮಲಕಾಪೊರೆ ಇತರರು ಭಾಗವಹಿಸಿದ್ದರು.

key words : Struggle-ST Reservation-shepherd-community- Minister-KS Eshwarappa