ಎಸ್‌ಟಿಗೆ ಸೇರಿಸುವ ಹೋರಾಟ, ”ಕುರುಬರನ್ನ ಇಬ್ಬಾಗ ಮಾಡುವ ಹುನ್ನಾರ” : ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ

ಮೈಸೂರು,ಡಿಸೆಂಬರ್,27,2020(www.justkannada.in)  : ಕುರುಬ ಸಮುದಾಯ ಎಸ್‌ಟಿಗೆ ಸೇರಿಸುವ ಹೋರಾಟ ಅಗತ್ಯವೇ ಇಲ್ಲ. ಇದು ಕುರುಬರನ್ನ ಇಬ್ಬಾಗ ಮಾಡುವ ಹುನ್ನಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶವ್ಯಕ್ತಪಡಿಸಿದರು.Teachers,solve,problems,Government,bound,Minister,R.Ashok

ಡಿ.29ಕ್ಕೆ ಮೈಸೂರಿನಲ್ಲಿ ಕುರುಬರ ಎಸ್‌ಟಿ‌ ಮೀಸಲಾತಿ ಹೋರಾಟ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ನಾನು ಸಿಎಂ ಆಗಿದ್ದಾಗಲೇ ಕುಲಶಾಸ್ತ್ರ ಅಧ್ಯಯನಕ್ಕೆ ಶಿಫಾರಸ್ಸು ಮಾಡಿದ್ದೆ. ಈಶ್ವರಪ್ಪ, ವಿಶ್ವನಾಥ್ ಇಬ್ಬರು ಬಿಜೆಪಿ ಸರ್ಕಾರದಲ್ಲಿದ್ದಾರೆ. ಅವರು ಕುಲಶಾಸ್ತ್ರ ಅಧ್ಯಯನ ವರದಿ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಿಸಲಿ ಎಂದರು.struggle,add-ST,Twilight,Shepherd,Former CM,Siddaramaia,outrage

siddaramaih#profile..

ಇದು ಕುರುಬರನ್ನ ಇಬ್ಬಾಗ ಮಾಡುವ ಆರ್‌ಎಸ್‌ಎಸ್‌ ಹುನ್ನಾರ. ಜಾತಿ ಗಣತಿ ವರದಿ ಪಡೆಯಲು ಎಚ್‌ಡಿಕೆ ಅಡ್ಡಿ ಎಂಬ ಪುಟ್ಟರಂಗಶೆಟ್ಟಿ ಹೇಳಿಕೆ ಹಿನ್ನೆಲೆ. ಪುಟ್ಟರಂಗಶೆಟ್ಟಿ ಸತ್ಯ ಹೇಳಿದ್ದಾರೆ. ವರದಿ ಸ್ವೀಕಾರ ಮಾಡದಂತೆ ಕುಮಾರಸ್ವಾಮಿ ಹೆದರಿಸಿದ್ದರು. ಕುಮಾರಸ್ವಾಮಿ ಯಾಕೆ‌ ವರದಿ ಪಡೆಯಲು ಹಿಂದೇಟು ಹಾಕಿದ್ರು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

key words : struggle-add-ST-Twilight-Shepherd-Former CM-Siddaramaia- outrage