Promotion
ನವದೆಹಲಿ,ಮಾರ್ಚ್,24,2023(www.justkannada.in): ಲೋಕಸಭಾ ಸದಸ್ಯತ್ವದಿಂದ ತಮ್ಮನ್ನ ಅನರ್ಹಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ದೇಶದ ಧ್ವನಿಗಾಗಿ ಹೋರಾಟ ಮಾಡುತ್ತೇನೆ. ಇದಕ್ಕಾಗಿ ಏನುಬೇಕಾದರೂ ಕಳೆದುಕೊಳ್ಳಲು ಸಿದ್ಧ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ನಾನು ಭಾರತೀಯರ ಧ್ವನಿಗಾಗಿ ಹೋರಾಡುತ್ತೇನೆ. ಇದಕ್ಕಾಗಿ ನಾನು ಎಲ್ಲದಕ್ಕೂ ಸಿದ‍್ಧನಿದ್ದೇನೆ. ಯಾವುದೇ ಬೆಲೆ ತೆರಲು ಸಿದ್ಧನಿದ್ಧೇನೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಇನ್ನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಎಐಸಿಸಿ ಕಚೇರಿಗೆ ತೆರಳಿದ್ದು ಇಂದು ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ಅನರ್ಹತೆ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ.
Key words: Struggle – country- Ready- Rahul Gandhi -reacts -Disqualified – membership