ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವುದನ್ನು ಕೂಡಲೇ ನಿಲ್ಲಿಸಿ- ಬಿಜೆಪಿ ಮುಖಂಡರಿಗೆ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸಲಹೆ…

ಮೈಸೂರು,ಜ,13,2020(www.justkannada.in):  ಏಸುಪ್ರತಿಮೆಯನ್ನ ವಿರೋಧಿಸಿ ಕನಕಪುರದಲ್ಲಿ ಬಿಜೆಪಿಯಿಂದ ಕನಕಪುರ ಚಲೋ ನಡೆಸಿದ ಕುರಿತು ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ,  ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವುದನ್ನು ಕೂಡಲೇ ನಿಲ್ಲಿಸಿ ಎಂದು ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ದೇಶದ ತುಂಬೆಲ್ಲಾ ಪ್ರತಿಮೆ ನಿರ್ಮಾಣ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಕನಕಪುರದಲ್ಲಿ ಏಸು ಪ್ರತಿಮೆ ನಿರ್ಮಾಣವಾಗಲಿ ಬಿಡಿ. ಅಲ್ಲಿ ಪ್ರತಿಮೆ ಆಗದಿದ್ದರೆ ಈಗಾಗಲೇ ರಾಜ್ಯದ ತುಂಬೆಲ್ಲಾ ಇರುವ ಪ್ರತಿಮೆಗಳನ್ನೆಲ್ಲಾ ಕೆಡವಿಬಿಡುತ್ತೀರಾ. ಸುಮ್ಮನೆ ಯಾಕೆ ಧಾರ್ಮಿಕ ವಿಚಾರಗಳನ್ನ ರಾಜಕೀಯಕ್ಕೆ ತರುತ್ತೀರಿ. ಜನರ ಕಷ್ಟ ಸುಖ ಕೇಳಿ, ಜನಪರವಾದ ಕೆಲಸಗಳನ್ನ ಮಾಡಿ. ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವುದನ್ನು ಕೂಡಲೇ ನಿಲ್ಲಿಸಿ ಎಂದು ಕಿಡಿಕಾರಿದರು.

ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ಬಿಜೆಪಿ ಮತ್ತು ಹಿಂದೂ ಜಾಗರಣಾ ಸಂಘಟನೆ ಕನಕಪುರದಲ್ಲಿ ಇಂದು ಬೃಹತ್ ರ್ಯಾಲಿ ನಡೆಸಿತು. ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್, ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್ ಸೇರಿ ಸಾವಿರಾರು ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

Key words:  Stop -politics- religion-mysore- MLC-Marithibbegowda -advises