ಆರ್ ಎಸ್ ಎಸ್ ಬಗ್ಗೆ ನೀಡಿರುವ ಹೇಳಿಕೆಗೆ ಬದ್ಧ: ಬಿಜೆಪಿ ನಾಯಕರನ್ನ ಚರ್ಚೆಗೆ ಆಹ್ವಾನಿಸಿದ ಮಾಜಿ ಸಿಎಂ ಹೆಚ್.ಡಿಕೆ.

Promotion

ರಾಮನಗರ,ಅಕ್ಟೋಬರ್,8,2021(www.justkannada.in): ಆರ್ ಎಸ್ ಎಸ್ ಅಜೆಂಡಾ ಬಗ್ಗೆ ಚರ್ಚಿಸಲು ನಾನು ಸಿದ್ಧ. ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರು ಚರ್ಚೆಗೆ ಬರಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಹ್ವಾನಿಸಿದ್ದಾರೆ.

ಚನ್ನಪಟ್ಟಣದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಆರ್ ಎಸ್ ಎಸ್ ಬಗ್ಗೆ ನೀಡಿರುವ ಹೇಳಿಕೆಗೆ ಬದ್ಧ. ನಾನು ವಾಸ್ತವತೆ ಆಧಾರದಲ್ಲಿ ಹೇಳಿದ್ದೇನೆ. ಸಾರ್ವಜನಿಕವಾಗಿ ಚರ್ಚೆಗೆ ಸಿದ್ಧ ಬಿಜೆಪಿ ಆರ್ ಎಸ್ ನಾಯಕರೂ ಬರಲಿ. ಆರ್ ಎಸ್ ಎಸ್ ಪ್ರಚಾರಕರು ಹೇಳಿರುವುದನ್ನ ನಾನು ಹೇಳಿರುವೆ. ಆರ್ ಎಸ್ ಎಸ್  ಬಿಜೆಪಿ ಕಾಶ್ಮೀರ ಹಾಳು ಮಾಡುತ್ತಿದ್ದಾರೆ. ನಾನು ದಾಖಲೆ ಆಧಾರದಲ್ಲಿ ನಾನು ಮಾತನಾಢುತ್ತಿದ್ದೇನೆ ಎಂದು ಹೇಳಿದರು.

ಆರ್ ಎಸ್ ಎಸ್ ಇಲ್ಲಿದ್ದರೇ ಭಾರತ ಪಾಕಿಸ್ತಾನವಾಗುತ್ತಿತ್ತು ಎಂಬ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಟಾಂಗ್ ನೀಡಿದ ಹೆಚ್ ಡಿ ಕುಮಾರಸ್ವಾಮಿ, ಸ್ವಾತಂತ್ರ ಬಂದಾಗ ಈಶ್ವರಪ್ಪ  ಹುಟ್ಟಿದ್ರಾ..?  ಯಾರ್ಯಾರ ಕೊಡುಗೆ ಏನು ಎಂಬುದು ಗೊತ್ತಿದೆಯಾ..?  ಎಂದು ಕಿಡಿಕಾರಿದರು.

Key words: statement -about –RSS-Former CM –HD Kumaraswamy- BJP leaders’- debate.

ENGLISH SUMMARY…

I am committed to my statement made on RSS: Former CM HDK invites BJP leaders for a debate
Ramanagara, October 8, 2021 (www.justkannada.in): Former Chief Minister H.D. Kumaraswamy has said that he is ready to debate about the RSS agenda. Let the BJP and RSS leaders come and debate with me.
Speaking with the media persons at Channapatna today, the former CM said he is committed to his earlier statement on RSS. “Whatever I have told is based on facts. I am ready for a public debate on it. Let the RSS and BJP leaders come. I have heard what RSS members talks. The RSS and BJP are destroying Kashmir. I am making allegations based on documents,” he said.
Keywords: Former CM H.D. Kumaraswamy/ BJP/ RSS/ debate