ಚುನಾವಣಾ ಆಯೋಗದ ಅಧಿಕಾರ ಕಸಿದುಕೊಂಡ ರಾಜ್ಯ ಸರ್ಕಾರ; ನ್ಯಾಯಾಂಗದ ಮೇಲೆ‌ ವಿಶ್ವಾಸವಿದೆ ಎಂದ ಡಿಕೆ ಶಿವಕುಮಾರ್.

Promotion

ಬೆಂಗಳೂರು,ಮೇ,18,2022(www.justkannada.in): ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಸಹ ಚುನಾವಣಾ ಆಯೋಗ ಹೈಕೋರ್ಟ್‌ ನಲ್ಲಿ ಮೆಮೋ ಸಲ್ಲಿಸಿ ರಾಜ್ಯ ಸರ್ಕಾರ ಅಧಿಕಾರ ಕಸಿದುಕೊಂಡಿರುವ ಕುರಿತು ತಿಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರಾದ ಡಿ‌.ಕೆ ಶಿವಕುಮಾರ್ ಅವರು ರಾಜ್ಯ ಸರ್ಕಾರದ ನಡೆಯನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

“ಸಂವಿಧಾನದ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಸ್ವಾಯತ್ತತೆ, ಸ್ವಾತಂತ್ರ್ಯ ನೀಡಲಾಗಿದೆ.  ಆದರೆ ಸರ್ಕಾರ ತನ್ನ ಅಧಿಕಾರವನ್ನು ಕಸಿದುಕೊಂಡಿದೆ ಎಂದು ಚುನಾವಣಾ ಆಯೋಗವೇ  ಹೇಳುತ್ತಿರುವಾಗ, ದೇಶದಲ್ಲಿ ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿದೆ ಎಂದು ಹೇಳಬಹುದೇ?” ಎಂದು ಚುನಾವಣಾ ಆಯೋಗದ ಅಧಿಕಾರವನ್ನು ಕಸಿದುಕೊಂಡ ರಾಜ್ಯ ಸರ್ಕಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸಹ ಚುನಾವಣಾ ಆಯೋಗವು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕಾ ಪಂಚಾಯಿತಿ ಚುನಾವಣೆ ನಡೆಸಲು ಸಾಧ್ಯವಾಗದಂತೆ ರಾಜ್ಯ ಸರ್ಕಾರವು ಅಧಿಕಾರ ಕಸಿದುಕೊಂಡ ಬಗ್ಗೆ ನ್ಯಾಯಾಲಯಗಳು ಸಮಸ್ಯೆ ಬಗೆಹರಿಸಬಹುದೆಂಬ ವಿಶ್ವಾಸವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಮ್ಮ ಟ್ವೀಟ್‌ ನಲ್ಲಿ ತಿಳಿಸಿದ್ದಾರೆ.

Key words: State Government- powers – Election Commission- DK Sivakumar

ENGLISH SUMMARY…

State Govt. has snatched EC’s power: I have trust on judiciary – DKS
Bengaluru, May 18, 2022 (www.justkannada.in): The Election Commission has submitted a memo to the Hon’ble High Court alleging the State Government of snatching its power though the Hon’ble Supreme Court has given its judgment concerning the Zilla Panchayat and Taluk Panchayat elections. KPCC President D.K. Shivakumar has tweeted questioning the State Government’s move.
“The Election Commission has been given autonomy and freedom in the constitution. But the State Govt. has snatched that power, as alleged by the Election Commission itself. Then, how can we say that democracy is existing in our country?” his tweet read.
However, he has also mentioned that though the State Govt. has snatched the power from the Election Commission concerning conducting the Zilla Panchayat and Taluk Panchayat elections he has trust in the judiciary.
Keywords: KPCC President D.K. Shivakumar/ State Govt./ tweet/ EC