ರಾಜ್ಯ ಸರ್ಕಾರದ್ದು ತಾಲಿಬಾನ್ ಸಂಸ್ಕೃತಿ- ಮಾಜಿ ಸಚಿವ ಯು.ಟಿ ಖಾದರ್ ವಾಗ್ದಾಳಿ.

Promotion

ಮಂಗಳೂರು,ಮೇ,17,2022(www.justkannada.in): ವಿದ್ಯಾರ್ಥಿಗಳಿಗೆ ಪೆನ್ ಪುಸ್ತಕ ಕೊಡುತ್ತಿಲ್ಲ. ಅದರ ಬದಲು ರೈಫಲ್ ಟ್ರೈನಿಂಗ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ್ದು ತಾಲಿಬಾನ್ ಸಂಸ್ಕೃತಿ ಎಂದು ಮಾಜಿ ಸಚಿವ ಯು.ಟಿ ಖಾದರ್ ವಾಗ್ದಾಳಿ ನಡೆಸಿದರು.

ಕೊಡಗಿನ ಶಾಲೆಯಲ್ಲಿ ತ್ರಿಶೂಲ ದಿಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಚಿವ ಯುಟಿ ಖಾದರ್, ಶಾಲೆಯಲ್ಲೇ ವಿದ್ಯಾರ್ಥಿಗಳಿಗೆ ರೈಫಲ್ ತರಬೇತಿ ಕೊಟ್ಟಿದ್ದಾರೆ ಶಾಸಕರೇ ಸ್ವತಃ  ಮುಂದೆ ನಿಂತು ಟ್ರೈನಿಂಗ್ ಕೊಟ್ಟಿದ್ದಾರೆ.ಇದು ತಾಲಿಬಾನ್ ಸಂಸ್ಕೃತಿ ತೋರುತ್ತದೆ. ಇಷ್ಟೆಲ್ಲಾ ಆದರೂ ಸಹ ಸಿಎಂ ಮೌನವಾಗಿ ಇರೋದು ಸರಿಯಲ್ಲ ಎಂದು ಕಿಡಿಕಾರಿದರು.

ಮುಸ್ಲಿಂರ ವೋಟ್ ನನಗೆ ಬೇಡ. ಹಿಂದೂಗಳ ವೋಟ್ ಸಾಕು ಎಂದು ಹೇಳಿಕೆ ನೀಡಿದ್ಧ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಹರಿಹಾಯ್ದ ಯು.ಟಿ ಖಾದರ್,  ಅವರ ಹೇಳಿಕೆ  ಅಪ್ರಭುದ್ದ ಕೀಳುಮಟ್ಟದ ರಾಜಕೀಯವಿದು. ಮತ ನೀಡಿದ ಜನರಿಗೆ ಮೊದಲು ಕೆಲಸ ಮಾಡಲಿ ಎಂದು ಟಾಂಗ್ ನೀಡಿದರು.

Key words: state government – Taliban- culture-Former Minister- UT Khader