ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ.

Promotion

ಬೆಂಗಳೂರು,ಸೆಪ್ಟಂಬರ್,21,2021(www.justkannada.in):  ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು ಮುಷ್ಕರದ ವೇಳೆ ವಜಾಗೊಂಡಿದ್ದ ಸಾರಿಗೆ ನೌಕರರ ಮರು ನೇಮಕಕ್ಕೆ  ಆದೇಶ ಹೊರಡಿಸಿದೆ.

ಈ ಕುರಿತು ಇಂದು ಸಾರಿಗೆ ನೌಕರರು ಮತ್ತು ಸಾರಿಗೆ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಸಭೆ ನಡೆದಿದ್ದು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಶ್ರೀರಾಮುಲು, ಮುಷ್ಕರದ ವೇಳೆ ವಜಾಗೊಂಡಿದ್ದ 4,200 ಸಾರಿಗೆ ನೌಕರರನ್ನು ಮರು ನೇಮಕ ಮಾಡಲು ನಿರ್ಧರಿಸಲಾಗಿದೆ. ಮುಷ್ಕರದ ವೇಳೆ ಅಮಾನತು, ವಜಾ, ವರ್ಗಾವಣೆ ಸೇರಿದಂತೆ ಬಹುತೇಕ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ತಿರ್ಮಾನಿಸಿದೆ. ವಜಾಗೊಂಡಿದ್ದ ಅಷ್ಟು ಸಾರಿಗೆ ನೌಕರರ ಮರುನೇಮಕ ಮಾಡಿಕೊಳ್ಳಲಾಗುತ್ತದೆ ಎಂದರು.

ಸಾರಿಗೆ ಯುನಿಯನ್  ನಾಯಕರ ಜತೆ ಚರ್ಚಿಸಲಾಗಿದೆ.  ಟ್ರೇಡ್ ಯುನಿಯನ್ ಜತೆ ಚರ್ಚಿಸುತ್ತೇವೆ. ಸಿಎಂ ಜತೆ ಚರ್ಚಿಸಲಾಗಿದೆ. ಸಾರಿಗೆ ಇಲಾಖೆಗೆ ತೊಂದರೆಯಾಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಶ್ರೀರಾಮಯಲು ತಿಳಿಸಿದರು.

Key words: state government – Good News – Transport employees.

ENGLISH SUMMARY…

State Government gives good news to Transport Dept. employees
Bengaluru, September 21, 2021 (www.justkannada.in): The State Government has given good news to the Transport Department employees by issuing orders to reinstate the workers who were suspended during the protest.
Transport Minister B. Sriramulu conducted a meeting today in Bengaluru, where the decision was taken.
Speaking to the media persons after the meeting the Minister Sriramulu informed that all the 4,200 transport department workers who were suspended during the demonstration will be reappointed. “The State Government has decided to withdraw all the cases that were imposed against the transport department workers during their protest, including suspension, dismissal, transfer, etc. All the employees will be recalled for services,” he informed.
Further, he said, “Discussions are being held with the transport department union leaders. We will also discuss this with the trade unions. We have already discussed this with the Chief Minister. We have taken this decision keeping in mind that the transport department employees and the common people should not suffer.”
Keywords: Transport Department/ Minister B. Sriramulu/ good news/ employees