ಎಲ್ಲಾ ಇಲಾಖೆಗಳಲ್ಲೂ ‘ನಗದು ಘೋಷಣೆ ವಹಿ’ ನಿರ್ವಹಿಸುವಂತೆ ರಾಜ್ಯ ಸರ್ಕಾರದಿಂದ ಸುತ್ತೋಲೆ.

kannada t-shirts

ಬೆಂಗಳೂರು,ಫೇಬ್ರವರಿ,7,2022(www.justkannada.in):  ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು,ಮಂಡಳಿಗಳು, ನಿಗಮ ಇತ್ಯಾದಿ ಕಚೇರಿಗಳಲ್ಲಿ ಪಾರದರ್ಶಕತೆಯನ್ನು ತರಲು ಸರ್ಕಾರ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳಲ್ಲಿ ನಗದು ಘೋಷಣೆ ವಹಿಯನ್ನು ನಿರ್ವಹಿಸುವಂತೆ ಸೂಚನೆ ನೀಡಿದೆ.

ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್,  ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಪಿಟಿಷನ್ ಸಂಖ್ಯೆ: 79/2021(GM-KLA) ರಲ್ಲಿ ದಿನಾಂಕ 10.11.2021 ರಂದು ನೀಡಿರುವ ನಿರ್ದೇಶನದನ್ವಯ, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು/ ಮಂಡಳಿಗಳು/ ನಿಗಮಗಳು ಈ ಕೆಳಗಿನ ಕಾರ್ಯ ವಿಧಾನವನ್ನು ಅನುಸರಿಸಿ, ಈ ಸುತ್ತೋಲೆಗೆ ಲಗತ್ತಿಸಲಾದ ನಿಗದಿತ ನಮೂನೆಯಲ್ಲಿ “ನಗದು ಘೋಷಣೆ ವಹಿಯನ್ನು ನಿರ್ವಹಣೆ ಮಾಡುವಂತೆ ನಿರ್ದೇಶಿಸಲಾಗಿದೆ.

“ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು/ಮಂಡಳಿಗಳು/ನಿಗಮ ಇತ್ಯಾದಿ ಕಚೇರಿಗಳಲ್ಲಿ ಪಾರದರ್ಶಕತೆಯನ್ನು ತರಲು, ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಗಿನ ಸೂಚನೆಗಳನ್ನು ಪಾಲಿಸಬೇಕು.final-decision-four-days-compliance-fees-industry-minister-jagadish-shettar

  1. ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ನೌಕರರ ವೈಯಕ್ತಿಕ ನಗದನ್ನು ಗಮನಿಸಲು ಪ್ರತಿ ಕೆಲಸದ ದಿನದ ಪ್ರಾರಂಭದಲ್ಲಿ “ನಗದು ಘೋಷಣೆ ವಹಿ”ಯನ್ನು ತೆರೆಯತಕ್ಕದ್ದು.
  2. ಸರ್ಕಾರಿ ನೌಕರರು ಅಧಿಕೃತ ಸಹಿ ಹಾಜರಾತಿ ವಹಿ/ಎಎಂಎಸ್ ನಲ್ಲಿ ಕೆಲಸದ ದಿನದಂದು ಕರ್ತವ್ಯಕ್ಕೆ ವರದಿ ಮಾಡಿದ ತಕ್ಷಣ, ಅವನು/ಅವಳು ಕಚೇರಿಗೆ ತಂದ ನಗದು ಮೊತ್ತವನ್ನು ನಗದು ಘೋಷಣೆ ವಹಿಯಲ್ಲಿ ತನ್ನ ಸಹಿಯೊಂದಿಗೆ ಘೋಷಿಸತಕ್ಕದ್ದು.
  3. ನಗದು ಘೋಷಣೆ ವಹಿಯು ಸಂಬಂಧಪಟ್ಟ ವಿಭಾಗ/ಶಾಖೆಯ ಗ್ರೂಪ್-ಬಿ ಅಧಿಕಾರಿಯ ವಶದಲ್ಲಿರತಕ್ಕದ್ದು ಮತ್ತು ಸದರಿ ಅಧಿಕಾರಿಯು ನೌಕರರು ಮಾಡಿದ ನಮೂದುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿರುತ್ತಾರೆ.
  4. ಯಾವುದೇ ನೌಕರರು ನಗದು ಘೋಷಣೆ ವಹಿಯಲ್ಲಿ ಘೋಷಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಹೊಂದಿರುವುದು ಕಂಡು ಬಂದರೆ, ಅಂತಹ ಹೆಚ್ಚುವರಿ ಹಣವನ್ನು ಅಕ್ರಮ ಸಂಪಾದನೆ ಎಂದು ಅರ್ಥೈಸಲಾಗುತ್ತದೆ. ಹಾಗೂ ಅಂತಹ ಹೆಚ್ಚುವರಿ ಹಣವನ್ನು ಸಕ್ರಮ ಹಣ ಎಂದು ಸಾಬೀತುಪಡಿಸುವುದು ನೌಕರರ ಹೊಣೆಯಾಗಿರುತ್ತದೆ.
  5. ನಗದು ಘೋಷಣೆ ವಹಿಯನ್ನು ಕಚೇರಿ ವೇಳೆಯ ಎಲ್ಲಾ ಸಮಯದಲ್ಲಿ ಯಾವುದೇ ಉನ್ನತ/ಸಕ್ಷಮ ಪ್ರಾಧಿಕಾರ/ಘಟಕದ ಮುಖ್ಯಸ್ಥರು ವಿಭಾಗದ ಮುಖ್ಯಸ್ಥರ ತಪಾಸಣೆಗಾಗಿ ತೆರೆದಿರತಕ್ಕದ್ದು.

ಮೇಲಿನ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಇವುಗಳ ಪಾಲನೆಯಲ್ಲಿ ಯಾವುದೇ ಲೋಪವುಂಟಾದರೇ ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಸಿಎಸ್ ರವಿ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

Key words: state government- all departments – cash declaration.

website developers in mysore