“ಕಳ್ಳನ ಮನಸು ಹುಳ್ ‌ಹುಳ್ಳಗೆ” : ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವೀಟ್

Promotion

ಬೆಂಗಳೂರು,ಮಾರ್ಚ್,25,2021(www.justkannada.in) : ಕಳ್ಳನ ಮನಸು ಹುಳ್‌ಹುಳ್ಳಗೆ ಎನ್ನುವಂತೆ ತಾವು ಮಾಡಿದ ಅನಾಚಾರ ಹೊರಬರದಂತೆ ತಡೆಯಾಜ್ಞೆ ತಂದಿದ್ದಲ್ಲದೆ ಇತರರ ಮೇಲೂ ವ್ಯಭಿಚಾರದ ಆರೋಪ ಹೊರಿಸಿದ್ದು, ಸ್ವತಃ ಬಿಜೆಪಿ ಪಕ್ಷದ ಕೆಲವು ಶಾಸಕರಿಗೆ ಮುಜುಗರವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಟೀಕಿಸಿದೆ.State-Congress-tweet-against-BJP

ಸಚಿವ ಡಾ.ಕೆ.ಸುಧಾಕರ್ ಮಾತು ಬರೀ ಅವರ ವ್ಯಕ್ತಿತ್ವವನ್ನಷ್ಟೇ ಅಲ್ಲ ಇಡೀ ಬಿಜೆಪಿಯ ವಿಕೃತ ಮನಸ್ಥಿತಿಯನ್ನು ಅನಾವರಣಗೊಳಿಸಿದೆ. ಸಚಿವ ಬಿ.ಸಿ.ಪಾಟೀಲ್ ಹೇಳಿದಂತೆ ಹುಚ್ಚರ ಕತೆಯಲ್ಲ, ಬಿಜೆಪಿ ಸರ್ಕಾರವೇ ಹುಚ್ಚರ ಸಂತೆಯಂತಾಗಿದೆ ಎಂದು ಕಿಡಿಕಾರಿದೆ.State-Congress-tweet-against-BJP

ವಮಾಮಾರ್ಗದ ಕೆಲಸಗಳಿಗೆ ಅಧಿಕಾರ ಬಳಕೆ 

ಶಾಸಕರು, ಸಚಿವರಿಗೆ ಸಮನ್ವಯತೆ ಇಲ್ಲ, ನಾಲಿಗೆಗಳಿಗೆ ಎಲುಬಿಲ್ಲ, ಮಾತುಗಳಿಗೆ ಅರ್ಥವಿಲ್ಲ, ಜನಪರ ಯೋಜನೆ, ಯೋಚನೆಗಳಂತೂ ಇಲ್ಲವೇ ಇಲ್ಲ. ವಾಮಮಾರ್ಗದಲ್ಲಿ ಹಿಡಿದ ಅಧಿಕಾರವನ್ನು ವಾಮಮಾರ್ಗದ ಕೆಲಸಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಲಾಗಿದೆ.

key words : State-Congress-tweet-against-BJP