ಇಂದು ರಾಜ್ಯ ಬಜೆಟ್ : ಬಂಗಾರದ ರಥಕ್ಕೆ ಅನುದಾನದ ನಿರೀಕ್ಷೆಯಲ್ಲಿ ತಾಯಿ ಚಾಮುಂಡೇಶ್ವರಿ ಭಕ್ತರು…

ಮೈಸೂರು,ಮಾ,5,2020(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು, ಈಗಾಗಲೇ ವಿಧಾನಸೌಧಕ್ಕೆ ಆಗಮಿಸಿದ್ದಾರೆ.

ಇಂದು ಬೆಳಿಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಸಿಎಂ ಬಿಎಸ್ ವೈ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು ಈ ನಡುವೆ ರಾಜ್ಯದ ಜನರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮಧ್ಯೆ ಬಜೆಟ್ ನಲ್ಲಿ ಮೈಸೂರು ಭಾಗಕ್ಕೆ ಬೃಹತ್ ಯೋಜನೆಗಳು ದೊರೆಯುತ್ತಾ ಕಾದು ನೋಡಬೇಕಿದೆ.

ಇನ್ನು ಚಾಮುಂಡಿ ಬೆಟ್ಟದ ಬಂಗಾರದ ರಥ ನಿರ್ಮಾಣಕ್ಕೆ ಅನುದಾನ ನೀಡಲಿದ್ದಾರೆಯೇ ಎಂಬ ನಿರೀಕ್ಷೆಯಲ್ಲಿ ತಾಯಿ ಚಾಮುಂಡೇಶ್ವರಿ ಭಕ್ತರಿದ್ದಾರೆ. ಮೈಸೂರು ಜಿಲ್ಲಾಡಳಿತ ಮುಜರಾಯಿ ಮಂತ್ರಿ ಹಾಗೂ ಉಸ್ತುವಾರಿ ಸಚಿವರ ಮೂಲಕ ಚಾಮುಂಡಿ ಬೆಟ್ಟದ ಬಂಗಾರ ರಥ ನಿರ್ಮಾಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಹೀಗಾಗಿ ಯಡಿಯೂರಪ್ಪ ಸರ್ಕಾರದ ಬಜೆಟ್ ಮೇಲೆ ನಿರೀಕ್ಷೆ ಹೆಚ್ಚಿದೆ.  ಬಜೆಟ್ ನಲ್ಲಿ ಮೈಸೂರಿನ ಪಾರಂಪರಿಕ ಕಟ್ಟಡಕ್ಕೆ ಕಾರ್ಯಕಲ್ಪ ಸಿಗುತ್ತಾ..? ದೇವರಾಜ ಮಾರುಕಟ್ಟೆ, ಲಾಂಡ್ಸ್ ಸ್ಟೋನ್ ಕಟ್ಟಡಕ್ಕೆ ಅನುದಾನ ದೊರೆಯುತ್ತದೆಯೇ ಎಂಬುದನ್ನ ಕಾದು ನೋಡಬೇಕಿದೆ.

ಮೈಸೂರು ನಗರ ಅಭಿವೃದ್ಧಿಗೆ ಕೋಟಿ ಕೋಟಿ ಹಣ. ಬೇಕಾಗಿದ್ದು, ಗ್ರೇಟರ್ ಮೈಸೂರಿಗೆ ಬಜೆಟ್ ನಲ್ಲಿ ಗ್ರೀನ್ ಸಿಗ್ನಲ್. ಸಿಗುವ ಸಾಧ್ಯತೆ ಇದೆ. ಕೃಷಿ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ ಬಜೆಟ್ ನಲ್ಲಿ ರೈತಾಪಿ ವರ್ಗಕ್ಕೆ  ನೀರಾವರಿ ಯೋಜನೆ  ನೀಡಲಿದ್ದಾರೆಯೇ ಎಂಬದು ಬಜೆಟ್ ಮಂಡನೆ ನಂತರ ತಿಳಿದು ಬರಲಿದೆ.

Key words: State budget –today-mysore-Chamundeshwari -devotees – grant -golden chariot.