ಇಂದು ರಾಜ್ಯ ಬಜೆಟ್ : ಬಜೆಟ್ ಪ್ರತಿಯೊಂದಿಗೆ ವಿಧಾನಸೌಧಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ…

Promotion

ಬೆಂಗಳೂರು,ಮಾ,5,2020(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದು ಸಿಎಂ ಬಿಎಸ್ ವೈ ಬಜೆಟ್ ಪ್ರತಿಯೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ್ದಾರೆ.

ಇಂದು ಸಚಿವ ಶ್ರೀರಾಮುಲು ಪುತ್ರಿ ವಿವಾಹ ಕಾರ್ಯ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಮಾರಂಭಕ್ಕೆ ಆಗಮಿಸಿ ನೂತನ ವಧು-ವರರಿಗೆ ಶುಭಹಾರೈಸಿ ಸಿಎಂ ಬಿಎಸ್​ ಯಡಿಯೂರಪ್ಪ ನಂತರ ವಿಧಾನಸೌಧದತ್ತ  ಆಗಮಿಸಿದರು.  ಬಜೆಟ್ ಪ್ರತಿಯೊಂದಿಗೆ ವಿಧಾನಸೌಧಕ್ಕೆ  ಸಿಎಂ ಬಿಎಸ್ ವೈ ಆಗಮಿಸಿದ್ದು ಇಂದು ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಮಂಡಿಸಲಿದ್ದಾರೆ.

ದೇಶದಲ್ಲೇ ಮೊದಲ ಬಾರಿಗೆ ಕೃಷಿ ವಲಯಕ್ಕೆ ಪ್ರತ್ಯೇಕ ಬಜೆಟ್ ಮಂಡಿಸಿದ್ದ ಬಿಎಸ್ ವೈ ಮೇಲೆ ರೈತಾಪಿ ವಲಯ ಭರಪೂರ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. 2020-21ನೇ ಸಾಲಿನ ಬಜೆಟ್ ನಲ್ಲಿ ಮೂಲಭೂತ ಸೌಕರ್ಯ, ಕೃಷಿ, ನೀರಾವರಿ, ಪ್ರವಾಹ ಪೀಡಿತ ಪ್ರದೇಶದ ಜನರ ನಿರೀಕ್ಷೆಗಳು ಹೀಗೆ ಸಾಲು ಸಾಲು ಸವಾಲುಗಳು ರಾಜ್ಯ ಸರ್ಕಾರದ ಮುಂದಿವೆ. ಹೀಗಾಗಿ ಸಿಎಂ ಬಿಎಸ್ ವೈ ಬಜೆಟ್ ನಲ್ಲಿ ರಾಜ್ಯದ ಅಭಿವೃದ್ದಿಗೆ  ಹೇಗೆ ಅನುಕೂಲವಾಗಲಿದೆ ಎಂಬುದನ್ನ ಕಾದು ನೋಡಬೇಕು..

Key words: State budget- today-CM BS Yeddyurappa – Budget Copy …