ಫೆಬ್ರವರಿಯಲ್ಲಿ ರಾಜ್ಯ ಬಜೆಟ್: ಬಡವರು, ರೈತರು, ಕಾರ್ಮಿಕರ ಪರ ಯೋಜನೆಗಳಿಗೆ ಆದ್ಯತೆ- ಸಿಎಂ ಬೊಮ್ಮಾಯಿ.

ಹಾವೇರಿ,ಡಿಸೆಂಬರ್,24,2022(www.justkannada.in): ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡುತ್ತೇನೆ. ಬಜೆಟ್ ನಲ್ಲಿ  ಬಡವರು, ರೈತರು, ಕಾರ್ಮಿಕರ ಪರ ಯೋಜನೆಗಳಿಗೆ ಆದ್ಯತೆ ನೀಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕು ಕಾರಡಗಿ ಗ್ರಾಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾರಡಗಿ ಗ್ರಾಮದ  ಅಭಿವೃದ್ದಿಗೆ ಅನೇಕ ಯೋಜನೆ ರೂಪಿಸಿದ್ದೇವೆ.  ಒಂದುವರೆ ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ಪ್ರಾರಂಭಿಸಿದ್ದೇನೆ. ಒಂದು ಕೋಟಿ ವೆಚ್ಚದಲ್ಲಿ ಸಭಾಭವನ ನಿರ್ಮಾಣ ಮಾಡುತ್ತೇವೆ.  ಕಾರಡಗಿಯಲ್ಲಿ 8 ಕೋಟಿ ವೆಚ್ದಲ್ಲಿ 30 ಬೆಡ್  ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ ಎಂದರು.

ಸ್ವಯಂ ಉದ್ಯೋಗಕ್ಕೆ ಆದ್ಯತೆ  ನೀಡುತ್ತೇವೆ. ನಮ್ಮ ಸರ್ಕಾರದಲ್ಲಿ 8 ಸಾವಿರ ಶಾಲಾ ಕೊಠಡಿ ತೆರೆದಿದ್ದೇವೆ.  4 ಸಾವಿರ ಹೊಸ ಅಂಗನವಾಡಿ ನಿರ್ಮಿಸಲಾಗುತ್ತಿದೆ. 12 ಲಕ್ಷ ಮಕ್ಕಳಿಗೆ ವಿದ್ಯಾಸಿರಿ ಯೋಜನೆ ದೊರೆತಿದೆ.  ರೈತರ ಮಕ್ಕಳಿಗೆ ವಿದ್ಯಾಸಿರಿ ಕೊಡ್ತಿದ್ದೇವೆ. ಕೂಲಿಕಾರರ ಮಕ್ಕಳಿಗೂ ವಿದ್ಯಸಿರಿ ಯೋಜನೆ ತಲುಪಲಿದೆ. ಆರೋಗ್ಯ, ಶಿಕ್ಷಣ, ಪೌಷ್ಟಿಕ ಆಹಾರಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: State- Budget – February—poor- farmers-workers –schemes-  CM Bommai.