ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಬಜೆಟ್ ನಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಸಿಎಂಗೆ ಮನವಿ…

Promotion

ಬೆಂಗಳೂರು,ಫೆಬ್ರವರಿ,19,2021(www.justkannada.in): ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ  ಬಜೆಟ್ ನಲ್ಲಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಮನವಿ ಸಲ್ಲಿಸಲಾಯಿತು.jk

ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ (ಕರ್ನಾಟಕ ಸರ್ಕಾರ) ಕ್ಕೆ ಮುಂಬರುವ 2021 – 2022 ಸಾಲಿನ ಆಯವ್ಯಯ (ಬಡ್ಜೆಟ್)ನಲ್ಲಿ   347 ಕೋಟಿ ರೂ. ಅನುದಾನವಾಗಿ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.state-brahmin-development-board-budget-rs-347-crore-request-cm-release-grant

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ (ಕರ್ನಾಟಕ ಸರ್ಕಾರ) ನಿರ್ದೇಶಕರಾದ ವೇ.ಬ್ರ ಡಾ॥ ಭಾನುಪ್ರಕಾಶ್ ಶರ್ಮಾ, ಸುಬ್ರಾಯ ಹೆಗಡೆ ಗೌರಿಬಣ್ಣಗಿ, ಕೆ.ಎನ್.ಛಾಯಪತಿ, ವೇ.ಬ್ರ ಡಾ॥ರಾಘವೇಂದ್ರ ಭಟ್, ರಾಜೇಂದ್ರ ಪ್ರಸಾದ್, ಪುರುಷೋತ್ತಮ್, ವತ್ಸಲ ನಾಗೇಶ್, ವಿ.ಪವನ್ ಕುಮಾರ್, ಎ.ಜೆ.ರಂಗವಿಠಲ, ಜಗದೀಶ್ ಹುನಗುಂದ ಉಪಸ್ಥಿತರಿದ್ದರು.

Key words: state -Brahmin Development Board – budget – Rs 347 crore- Request- CM – release – grant.