ಸಚಿವರ ಕಾರ್ಯವೈಖರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಸಮಾಧಾನ.

Promotion

ಬೆಂಗಳೂರು,ಮೇ,14,2022(www.justkannada.in):  ಸಚಿವರು ಪಕ್ಷ, ಸರ್ಕಾರವನ್ನ ಸಮರ್ಥನೆ ಮಾಡಿಕೊಂಡಿಲ್ಲ ಎಂದು ಸಚಿವರ ಕಾರ್ಯವೈಖರಿ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ  ಅರುಣ್ ಸಿಂಗ್ ಸಚಿವರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಸಚಿವರು  ಪಕ್ಷ, ಸರ್ಕಾರವನ್ನ ಸಮರ್ಥನೆ ಮಾಡಿಕೊಂಡಿಲ್ಲ ರಾಜಕೀಯವಾಗಿ ಯಾವೂಬ್ಬ ಸಚಿವರು ಸಮರ್ಥನೆ ಮಾಡಿಕೊಂಡಿಲ್ಲ.  ಕೇವಲ ತಮ್ಮ ಇಲಾಖೆ ಬಗ್ಗೆ ಮಾತ್ರ ಹೇಳಿಕೊಂಡು ಕುಳಿತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ಇನ್ಮುಂದೆ ಹೀಗೆ ಮುಂದುವರೆಯದಂತೆ ಎಚ್ಚರಿಕೆ ನೀಡಿರುವ ಅರುಣ್ ಸಿಂಗ್, ವಾರದಲ್ಲಿ 10 ಸಚಿವರು ಪಕ್ಷದ ಕಚೇರಿಯಲ್ಲಿ ಬಂದು ರಾಜಕೀಯವಾಗಿ ವಿಯಯಾಧಾರಿತ ಸಮರ್ಥನೆ ಮಾಡಿಕೊಳ್ಳಬೇಕು ಯಾವ ಸಚಿವರು ಬರುವುದಿಲ್ಲವೂ ಅವರ ಪಟ್ಟಿ ನನಗೆ ಕೊಡಬೇಕು ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Key words: State- BJP –incharge- Arun Singh – minister’s- performance.