ರಾಜ್ಯ ಬಿಜೆಪಿ ಸರ್ಕಾರ ‘ಸಿಡಿ’ಗಳ ಸರ್ಕಾರ- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವ್ಯಂಗ್ಯ…

Promotion

ಮೈಸೂರು, ಮಾರ್ಚ್,3,2021(www.justkannada.in):  ರಾಸಲೀಲೆ ವಿಡಿಯೋ ಬಹಿರಂಗವಾದ ಬಳಿಕ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು ಈ ಹಿನ್ನೆಲೆ ರಾಜ್ಯ ಬಿಜೆಪಿ ಸರ್ಕಾರ ‘ಸಿಡಿ’ಗಳ ಸರ್ಕಾರ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವ್ಯಂಗ್ಯವಾಡಿದ್ದಾರೆ.jk

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ರಾಜ್ಯ ಬಿಜೆಪಿ ಸರ್ಕಾರ ‘ಸಿಡಿ’ಗಳ ಸರ್ಕಾರವಾಗಿದೆ. ಸೆಕ್ಸ್ ಸಿಡಿ, ಭ್ರಷ್ಟಾಚಾರದಿಂದ ಈ ಸರ್ಕಾರ ನಡೆಯುತ್ತಿದೆ. 2009ರಲ್ಲಿ ಎಂ.ಪಿ ರೇಣುಕಾಚಾರ್ಯ, 2012ರಲ್ಲಿ ಹರತಾಳು ಹಾಲಪ್ಪ, ಲಕ್ಷ್ಮಣ್ ಸವದಿ, ಸಿಸಿ ಪಾಟೀಲ್, 2013ರಲ್ಲಿ ರಘುಪತಿ ಭಟ್,  ಇದೀಗ 2021ರಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗವಾಗಿದೆ. ಶೇ. 70 ರಷ್ಟು ಬಿಜೆಪಿಗರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವಿದೆ ಎಂದು ಆರೋಪಿಸಿದರು.State –BJP- Government -CDs –Government-KPCC spokesperson -M. Laxman

ಬಿಜೆಪಿಯಲ್ಲಿರುವ ಮಹಿಳೆಯರು ಎಚ್ಚರದಿಂದಿರಿ. ನಿಮ್ಮ ಮಂತ್ರಿಗಳು ಮತ್ತು ಶಾಸಕರ ಕ್ಯಾರೆಕ್ಟರ್ ಆ ರೀತಿ ಇದೆ. ಮಾತೆತ್ತಿದರೇ ರಾಹುಲ್ ಗಾಂಧಿ ಬಗ್ಗೆ ಮಾತನಾಡುತ್ತಾರೆ. ಈಗ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಲಿ. ಸಿಟಿ ರವಿ, ಪ್ರತಾಪ್ ಸಿಂಹ, ಶೋಭಾಕರಂದ್ಲಾಜೆ ಅವರು ಮಾತನಾಡಲಿ ಎಂದು ಟಾಂಗ್ ನೀಡಿದರು.

Key words: State –BJP- Government -CDs –Government-KPCC spokesperson -M. Laxman