ರಾಜ್ಯ ಬಿಜೆಪಿ ನಿಯೋಗದಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್ ಶಾ ಭೇಟಿ ಅಂತ್ಯ: ಚರ್ಚೆ ಬಳಿಕ ಅಮಿತ್ ಶಾ ಕೊಟ್ಟ ಸೂಚನೆ ಏನು..?

Promotion

ನವದೆಹಲಿ,ಜು,25,2019(www.justkannada.in): ರಾಜ್ಯದಲ್ಲಿ ಸರ್ಕಾರ  ರಚನೆ ವಿಚಾರ ಕುರಿತು ಚರ್ಚೆಸಲು ತಮ್ಮನ್ನು ಭೇಟಿ ಮಾಡಿದ್ದ ಬಿಜೆಪಿ ನಿಯೋಗಕ್ಕೆ ನಾವು ಸೂಚನೆ ನೀಡುವವರೆಗೂ ಕಾಯಿರಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ನಿಯೋಗ ನವದೆಹಲಿಯ ಅಕ್ಬರ್ ರಸ್ತೆಯಲ್ಲಿರುವ  ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ಭೇಟಿ ನೀಡಿ ರಾಜ್ಯದಲ್ಲಿ ಸರ್ಕಾರ ರಚನೆ ಬಗ್ಗೆ ಅಮಿತ್ ಶಾ ಜತೆ ಚರ್ಚೆ ನಡೆಸಿತು. ಚರ್ಚೆ ವೇಳೆ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ವಿವರಣೆ ನೀಡಿದೆ. ಅತೃಪ್ತ ಶಾಸಕರು ಮನಸ್ಸು ಬದಲಾಯಿಸೋ ಪ್ರಶ್ನೆಯೇ ಇಲ್ಲ.  ಅತೃಪ್ತ ಶಾಸಕರಿಂದ ಸರ್ಕಾರ ರಚನೆಗೆ ಯಾವುದೇ ಸಮಸ್ಯೆ ಇಲ್ಲ ಸ್ಪೀಕರ್ ಆದಷ್ಟು ಬೇಗ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮುಂತಾದ ವಿಚಾರಗಳ ಬಗ್ಗೆ ಅಮಿತ್ ಶಾಗೆ ವಿವರಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ನಾವು ಸೂಚನೆ ನೀಡುವವರೆಗೂ  ಕಾಯುವುದು ಉತ್ತಮ ಎಂದು ಅಮಿತ್ ಶಾ ರಾಜ್ಯ ಬಿಜೆಪಿ ನಿಯೋಗಕ್ಕೆ  ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಮಧ್ಯಾಹ್ನ 3 ಗಂಟೆಗೆ ಮತ್ತೆ ಭೇಟಿ ಮಾಡುವಂತೆ  ಅಮಿತ್ ಶಾ  ನಿಯೋಗಕ್ಕೆ ತಿಳಿಸಿದ್ದಾರೆ.

ಅಮಿತ್ ಶಾ ರಾಜ್ಯ ಬಿಜೆಪಿ ನಿಯೋಗದಿಂದ ಭೇಟಿ  ವೇಳೆ  ನಡೆದ ಚರ್ಚೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ   ಬಿಎಸ್ ಯಡಿಯೂರಪ್ಪ ಮಾಹಿತಿ ಪಡೆದಿದ್ದಾರೆ.

Key words: State –BJP- delegation –meet- BJP President Amit Shah- ends