ಭಾರತೀಯ ಮೂಲದ ನರಸಿಂಹನ್ ಸ್ಟಾರ್‌ ಬಕ್ಸ್ ನ  ನೂತನ ಸಿಇಒ

Promotion

ನ್ಯೂಯಾರ್ಕ್, ಸೆಪ್ಟೆಂಬರ್ 2, 2022 (www.justkannada.in): ಬಹುರಾಷ್ಟ್ರೀಯ ಫುಡ್ ಜಾಯಿಂಟ್ ಕಂಪನಿ ಸ್ಟಾರ್‌ ಬಕ್ಸ್ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ಅವರನ್ನು ಮುಂದಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ (ಸಿಇಒ) ನೇಮಕ ಮಾಡಿದೆ. ನರಸಿಂಹನ್ ಅವರು ವಿಶ್ವದ ಅತೀ ದೊಡ್ಡ ಕಾಫಿ ಚೇನ್‌ ನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲ್ಲಿದ್ದಾರೆ.

ಸ್ಟಾರ್‌ಬಕ್ಸ್ ನ ದೀರ್ಘಕಾಲದ ಒಡನಾಡಿ ಹಾಗೂ ಸಿಇಒ ಹೊವಾರ್ಡ್ ಶುಲ್ಟ್ ಝ ಅವರಿಂದ ನರಸಿಂಹನ್ ಅವರು ಮುಂದಿನ ಏಪ್ರಿಲ್‌ ನಲ್ಲಿ ಅಧಿಕಾರ ಪಡೆಯಲಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿ ಕೆವಿನ್ ಜಾನ್ಸನ್ ಇಸಿಓ ಆಗಿ ರಾಜೀನಿಮಾಮೆ ನೀಡಿದ ನಂತರ ಹೊವಾರ್ಡ್ ಅವರು ಕಂಪನಿಯ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ಈ ಸಂಬಂಧ ಸಂದರ್ಶನವೊಂದರಲ್ಲಿ ಮಾತನಾಡಿದ ಶೂಲ್ಟ್ ಝ ಅವರು, “ನಾವು ಕಂಪನಿಯನ್ನು ಮುನ್ನಡೆಸಲು ಅತ್ಯಂತ ವಿಧೇಯತೆಯುಳ್ಳ ನಿಜವಾದ ನಾಯಕನಿಗಾಗಿ ಹುಡುಕಾಡುತ್ತಿದ್ದೆವು. ಲಕ್ಷ್ಮಣ್ ಅವರು ನಿಜಕ್ಕೂ ಓರ್ವ ವಿಧೇಯ ನಾಯಕ,” ಎಂದರು.

55 ವರ್ಷ ವಯಸ್ಸಿನ  ನರಸಿಂಹನ್ ಅವರು ವಿಶ್ವದ ಅತ್ಯಂತ ಪ್ರಮುಖ ಕಾರ್ಪೊರೇಟ್ ನಾಯಕತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ. ಸ್ಟಾರ್‌ ಬಕ್ಸ್ ವಿಶ್ವದಾದ್ಯಂತ ೩೫,೦೦೦ ಮಳಿಗೆಗಳು ಹಾಗೂ ೩೮೩,೦೦೦ ಉದ್ಯೋಗಿಗಳನ್ನು ಹೊಂದಿರುವ ಬೃಹತ್ ಕಂಪನಿಯಾಗಿದೆ. ಪೆಪ್ಸಿಕೊದ ಮಾಜಿ ಹಿರಿಯ ಕಾರ್ಯನಿರ್ವಾಹಕರಾಗಿರುವ ನರಸಿಂಹನ್  ಅವರು, ಇತ್ತೀಚಿಗೆ ಲೈಸಾಲ್ ಸೋಂಕು ನಿವಾರಕ ದ್ರವ ಹಾಗೂ ಡ್ಯೂರೆಕ್ಸ್ ಕಾಂಡಮ್‌ ಗಳನ್ನು ತಯಾರಿಸುವ ಬ್ರಿಟಿಷ್ ಮೂಲದ ರೆಕಿಟ್ಟ್ ಬೆನ್ಕಿಸೆರ್ ಸಂಸ್ಥೆಯನ್ನು ಮುನ್ನಡೆಸಿದ ಅನುಭವವನ್ನು ಹೊಂದಿದ್ದಾರೆ.

ಭಾರತದ ಪುಣೆಯಲ್ಲಿ ಜನಿಸಿದ ನರಸಿಂಹನ್ ಅವರು ೧೯೯೧ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಪೆನ್‌ಸಿಲ್ವೇನಿಯಾ ಯೂನಿವರ್ಸಿಟಿಯ ವ್ಹಾರ್ಟನ್ ಸ್ಕೂಲ್‌ ನಲ್ಲಿ ಕಲಿತಿದ್ದಾರೆ. ನಂತರ ಬಹುರಾಷ್ಟ್ರೀಯ ಸಲಹಾ ಸಂಸ್ಥೆ ಮೆಕಿನ್ಸೆ & ಕಂ.ಗೆ ಸೇರ್ಪಡೆಗೊಂಡು, ಅಲ್ಲಿ ಹಿರಿಯ ಪಾಲುದಾರರಾದರು. ೨೦೧೨ರಲ್ಲಿ ಅವರು ಪೆಪ್ಸಿಕೊಗೆ ತೆರಳಿ, ಕ್ರಮೇಣ ಲ್ಯಾಟಿನ್ ಅಮೇರಿಕಾ, ಯೂರೋಪ್ ಹಾಗೂ ಸಬ್ ಸಹಾರನ್ ಆಫ್ರಿಕಾದ ವ್ಯವಹಾರಗಳ ಮೇಲ್ವಿಚಾರಕರಾಗಿ ಬಡ್ತಿ ಪಡೆದುಕೊಂಡರು. ನಂತರದಲ್ಲಿ ಮುಖ್ಯ ವಾಣಿಜ್ಯ ಅಧಿಕಾರಿಯಾದರು.

೨೦೧೯ರಲ್ಲಿ ಅವರನ್ನು ರೆಕಿಟ್ಟ್ ಕಂಪನಿಯ ಪುನರುಜ್ಜೀವನಕ್ಕಾಗಿ ನೇಮಿಸಿಕೊಂಡಿತು. ಆ ಸಮಯದಲ್ಲಿ ರೆಕಿಟ್ಟ್, ಶಿಶುಗಳ ಉತ್ಪನ್ನಗಳನ್ನು ತಯಾರಿಸುವ ಮೀಡ್ ಜಾನ್ಸನ್ ಕಂಪನಿಯನ್ನು ಖರೀದಿಸಿದ ಕಾರಣದಿಂದಾಗಿ ೧೬.೬ ಬಿಲಿಯನ್ ಡಾಲರ್‌ ಗಳ ಸಾಲದಲ್ಲಿ ಮುಳುಗಿತ್ತು. ಆಗ ಕಂಪನಿಗೆ ಸೇರ್ಪಡೆಗೊಂಡ ನರಸಿಂಹನ್ ಅವರು ತನ್ನ ಸಾಮರ್ಥ್ಯದಿಂದ ಸಾಂಕ್ರಾಮಿಕದ ಸಮಯದಲ್ಲಿಯೂ ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಿ, ಹೂಡಿಕೆದಾರರು ಹಾಗೂ ವಿಶ್ಲೇಷಕರ ಪ್ರಶಂಸೆಯನ್ನು ಪಡೆದುಕೊಂಡರು.

ನರಸಿಂಹನ್ ಅವರು ಸ್ಟಾರ್‌ಬಕ್ಸ್ ಗೆ  ಅಕ್ಟೋಬರ್‌ ನಲ್ಲಿ ಸೇರ್ಪಡೆಗೊಳ್ಳುತ್ತಾರೆ ಎಂದು ಶೂಲ್ಟ್ ಝ ಅವರು ತಿಳಿಸಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: starbucks-names-indian- narasimhan- new-ceo