ಡೈವೋರ್ಸ್’ನಲ್ಲಿ ಸ್ಟಾರ್ ದಂಪತಿ ಸಮಂತಾ –ನಾಗಚೈತನ್ಯ ಜಗಳ ಅಂತ್ಯ ?!

Promotion

ಬೆಂಗಳೂರು, ಸೆಪ್ಟೆಂಬರ್ 24, 2021 (www.justkannada.in): ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ದಾಂಪತ್ಯದಲ್ಲಿ ಕಲಹ ಉಂಟಾಗಿದ್ದು, ಡಿವೋರ್ಸ್ ಪಡೆಯುವ ಹಾದಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಸಮಂತಾ ಅಥವಾ ನಾಗಚೈತನ್ಯ ಯಾರೊಬ್ಬರು ಸ್ಪಷ್ಟನೆ ನೀಡಿಲ್ಲ. ಆದರೆ ಸಮಂತಾ ಟ್ವಿಟ್ಟರ್‌ನಲ್ಲಿ ಸರ್‌ನೇಮ್ ತೆಗೆದು ಹಾಕಿದರು. ‘ಅಕ್ಕಿನೇನಿ’ ಹೆಸರು ತೆಗೆದು ‘ಎಸ್’ ಎಂದು ಉಳಿಸಿಕೊಂಡಿದ್ದಾರೆ.

ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಸುದ್ದಿಯನ್ನು ಅಕ್ಟೋಬರ್ 7 ರಂದು ಅಧಿಕೃತಪಡಿಸಲು ತೀರ್ಮಾನಿಸಿದ್ದಾರಂತೆ. ಆ ದಿನ ನಾಗ್-ಸ್ಯಾಮ್ ಮದುವೆಯಾದ ದಿನ. ಬಹುಶಃ ಅದೇ ದಿನವೇ ಡಿವೋರ್ಸ್ ಘೋಷಣೆ ಮಾಡುವ ಸಾಧ್ಯತೆ ಎಂದು ಎನ್ನಲಾಗಿದೆ.

ನಾಗ್ ಜೊತೆಗಿನ ದಾಂಪತ್ಯ ಕೊನೆಗೊಳಿಸಿಕೊಳ್ಳಲು 50 ಕೋಟಿ ಪರಿಹಾರ ಪಡೆದುಕೊಂಡಿದ್ದಾರಂತೆ. ಡಿವೋರ್ಸ್‌ಗೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ.

key words: Star couple Samantha and naga chaitanya Divorce?