ಇಂದಿನಿಂದ ಎಸ್.ಎಸ್. ಎಲ್ .ಸಿ ಪೂರಕ ಪರೀಕ್ಷೆ ಆರಂಭ…

Promotion

ಬೆಂಗಳೂರು,ಸೆಪ್ಟಂಬರ್,21,2020(www.justkannada.in):  ಇಂದಿನಿಂದ ಎಸ್.ಎಸ್ ಎಲ್ ಸಿ ಪೂರಕ ಪರೀಕ್ಷೆ ಆರಂಭವಾಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಪೂರಕ ಪರೀಕ್ಷೆಯನ್ನ ಶಿಕ್ಷಣ ಇಲಾಖೆ ನಡೆಸುತ್ತಿದೆ.jk-logo-justkannada-logo

ಇಂದಿನಿದ  ಸೆಫ್ಟಂಬರ್ 29ರವರೆಗೆ ಪೂರಕ ಪರೀಕ್ಷೆಗಳು ನಡೆಯಲಿದ್ದು ಇಂದು ಮೊದಲನೇ ದಿನ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆಯಲಿದ್ದಾರೆ. ಮಾಸ್ಕ್ ಕಡ್ಡಾಯ,  ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸ್ಯಾನಿಟೈಸರ್ ಬಳಕೆ ಸೇರಿ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.sslc-supplementry-exam-begain-today

ಇನ್ನು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

Key words: SSLC –Supplementry exam-begain- today